More

    ಆರಾಧ್ಯ ದೈವ ದರ್ಶನ ಪುನರಾರಂಭ

    ವಿಜಯಪುರ: ಕರೊನಾ ಮಹಾಮಾರಿಯಿಂದ ಎರಡು ತಿಂಗಳಿಂದ ದೇಗುಲಗಳಲ್ಲಿ ಸ್ಥಗಿತಗೊಂಡಿದ್ದ ಭಕ್ತರ ಪ್ರವೇಶ ಜೂ.8ರಿಂದ ಪುನರಾರಂಭವಾಗಲಿದೆ.
    ದೇವಸ್ಥಾನ, ಮಸೀದಿ, ಮಂದಿರಗಳ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿದ್ದು,ದೇವರ ದರ್ಶನಕ್ಕಾಗಿ ಭಕ್ತರು ಕಾತರದಿಂದ ಎದುರು ನೋಡುತ್ತಿದ್ದಾರೆ.
    *ದೇವಸ್ಥಾನದಲ್ಲಿ ಸ್ವಚ್ಛತೆಗೆ ಕ್ರಮ
    ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಶ್ರೀ ಸಿದ್ಧರಾಮೇಶ್ವರ ನೆಲೆಗೊಂಡಿರುವ ದೇವಸ್ಥಾನವನ್ನು ಭಾನುವಾರ ರಾಸಾಯನಿಕ ಸಿಂಪಡಣೆ ಮಾಡುವ ಮೂಲಕ ಸ್ವಚ್ಛಗೊಳಿಸಲಾಯಿತು. ವಿಜಯಪುರ ಜಿಲ್ಲೆ ಅಲ್ಲದೆ ಬಾಗಲಕೋಟೆ, ಬೆಳಗಾವಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಈ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಮಹಾರಾಷ್ಟ್ರದ ಸೊಲ್ಲಾಪುರ, ಮಿರಜ್, ಸಾಂಗಲಿ, ಸತಾರ ಇನ್ನಿತರ ಭಾಗದಲ್ಲಿಯೂ ಭಕ್ತರಿದ್ದಾರೆ. ಸೋಮವಾರದಿಂದ ದೇವರ ದರ್ಶನ ಭಾಗ್ಯ ಸಿಗಲಿದ್ದು, ಭಕ್ತರು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೆ, ಅಡವಿ ಶಂಕರಲಿಂಗೇಶ್ವರ, ವಜ್ರಹನುಮಾನ್ ದೇವಸ್ಥಾನ, ನಂಜನಗೂಡು ಮಠ, ದಿವಟಗಿರಿಯಲ್ಲಿರುವ ರಾಯರ ಮಠ, ಕೃಷ್ಣ ಮಠ ಸೇರಿ ಇನ್ನಿತರ ಕಡೆಗಳಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

    ಅಂತರ ಕಾಯ್ದುಕೊಳ್ಳುವುದು ಸವಾಲು

    ದೇವಸ್ಥಾನದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳವುದು ದೊಡ್ಡ ಸವಾಲಾಗಿದೆ. ಎರಡು ತಿಂಗಳ ನಂತರ ದೇವರ ದರ್ಶನ ಭಾಗ್ಯ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಆಗಮಿಸುವ ಸಾಧ್ಯತೆ ಇದೆ. ಇದರಿಂದಾಗಿ ಪರಸ್ಪರ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘನೆಯಾಗುವ ಆತಂಕ ಅರ್ಚಕರನ್ನು ಕಾಡುತ್ತಿದೆ. ಗರ್ಭಿಣಿಯರು, 65 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧಿಸಿ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

    ಮಾಸ್ಕ್ ಧರಿಸುವಂತೆ ನಿದರ್ಶನ

    ದೇವಸ್ಥಾನಗಳಿಗೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು, ದೇವಸ್ಥಾನ ಸಿಬ್ಬಂದಿ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಮೊಬೈಲ್‌ಗಳಲ್ಲಿ ಅಳವಡಿಸಿಕೊಂಡಿರಬೇಕು. ದೇವಸ್ಥಾನ ಪ್ರವೇಶ ದ್ವಾರದಲ್ಲಿ ದೇಹದ ಉಷ್ಣತೆಯನ್ನು ತಪಾಸಣೆ ಮಾಡುವುದು ಕಡ್ಡಾಯವಾಗಿದೆ. ಪರಸ್ಪರ ಅಂತರ ಕಾಯ್ದುಕೊಳ್ಳಲು ದೇವಸ್ಥಾನ ಮುಂದೆ ಮಾರ್ಕ್‌ಗಳನ್ನು ಮಾಡಲಾಗಿದೆ.

    ದೇವಸ್ಥಾನಗಳ ಬಾಗಿಲು ತೆರೆಯಲು ಸರ್ಕಾರ ಅವಕಾಶ ನೀಡಿದ್ದು ಶ್ಲಾಘನೀಯ. ದೇವರ ದರ್ಶನ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
    ವೀರೇಶ ಜುಮನಾಳ, ಭಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts