More

    ಪರಿಶ್ರಮದಿಂದ ಸ್ವಂತ ಉದ್ಯೋಗದಲ್ಲಿ ಯಶಸ್ಸು

    ವಿಜಯಪುರ: ರಂಗು ರಂಗಿನ ಐಟಿ ಬಿಟಿ ಉದ್ಯೋಗಗಳಿಂದ ಯುವ ಜನಾಂಗ ವಿಮುಖರಾಗಿ, ಹಳ್ಳಿ ಬದುಕಿನತ್ತ ಮುಖ ಮಾಡುತ್ತ, ಕೃಷಿಯಲ್ಲಿ ತೊಡಗುತ್ತಿದ್ದಾರೆ. ಅದರ ಪ್ರಮಾಣ ಕಡಿಮೆಯಾಗಿದ್ದರೂ ಸಕಾರಾತ್ಮಕ ಬೆಳವಣಿಗೆ ಎಂದೇ ಹೇಳಬೇಕು ಎಂದು ವಿಜಯಪುರದ ಪಶು ಪಾಲನಾ ಇಲಾಖೆಯ ಮುಖ್ಯ ಪಶುಪಾಲನಾ ಅಧಿಕಾರಿ ಡಾ. ಮಲ್ಲಿಕಾರ್ಜುನ ಹಿರೇಮಠ ಹೇಳಿದರು.
    ಇಲ್ಲಿನ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನಗಳವರೆಗೆ ಹಮ್ಮಿಕೊಂಡಿದ್ದ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
    ಕೃಷಿಯನ್ನು ಉಸಿರಾಗಿಸಿಕೊಂಡಿರುವ ಭಾರತದಲ್ಲಿ ಯುವಕರು ಶ್ರದ್ಧೆ, ಪರಿಶ್ರಮದಿಂದ ಹೈನುಗಾರಿಕೆಯಲ್ಲಿ ತೊಡಗಿದರೆ ಯಶಸ್ಸು ಕಾಣಬಹುದು ಎಂದರು.
    ಸರ್ಕಾರದ ಪಶುಭಾಗ್ಯದಂತಹ ಯೋಜನೆಗಳನ್ನು ಬಳಸಿಕೊಂಡು ಅದರಿಂದ ಹೈನುಗಾರಿಕೆ ಉದ್ಯಮದ ಬೆಳವಣಿಗೆಗೆ ಅನುಕೂಲವಾಗುತ್ತದೆ. ಹೈನುಗಾರಿಕೆ ಉದ್ಯಮದಲ್ಲಿ ತಂತ್ರಜ್ಞಾನದ ಬಳಕೆಗಾಗಿ ಕೇಂದ್ರ ಸರ್ಕಾರದ ಇ-ಗೋಪಾಲ್ ಆ್ಯಪ್ ಸಾಕಷ್ಟು ಮಾಹಿತಿ-ತಿಳಿವಳಿಕೆ ಒದಗಿಸುತ್ತಿದೆ. ಅದನ್ನು ಬಳಸುವಂತೆ ಹೇಳಿದರು.
    ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಆರ್.ಡಿ. ಜೈನಾಪುರ ಅಧ್ಯಕ್ಷತೆ ವಹಿಸಿ, ಉದ್ಯಮದಲ್ಲಿ ಆರ್ಥಿಕ ಶಿಸ್ತು ಬಹಳ ಮುಖ್ಯವಾಗುತ್ತದೆ. ಅದನ್ನು ಅಳವಡಿಸಿಕೊಳ್ಳಿ. ಕೃಷಿ ಪ್ರಧಾನ ಸ್ವಂತ ಉದ್ಯೋಗಗಳಿಗೆ ಎರೆಹುಳು ಗೊಬ್ಬರ ತಯಾರಿಕೆಯು ಸಹಕಾರಿಯಾಗಿದೆ. ಸಾವಯವ ಕೃಷಿಯಿಂದ ರೈತರ ಬದುಕು ಹಸನಾಗಲಿದೆ. ಹೈನುಗಾರಿಕೆ ಉದ್ಯೋಗವನ್ನು ಯುವ ಜನಾಂಗ ಕೈಗೊಂಡರೆ ಬ್ಯಾಂಕ್‌ಗಳು ಸುಲಭವಾಗಿ ವಿವಿಧ ಯೋಜನೆಗಳಡಿ ಸಾಲ ಕೊಡುತ್ತವೆ. ಅವುಗಳನ್ನು ಬಳಸಿಕೊಂಡು ಬೆಳವಣಿಗೆ ಹೊಂದಿ ಎಂದರು.
    ಸಂಸ್ಥೆಯ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಹತ್ತಿ ನಿರೂಪಿಸಿದರು. ಹಿರಿಯ ಉಪನ್ಯಾಸಕ ಬಸವರಾಜ ಸನಪಾ ವಂದಿಸಿದರು.

    ಪರಿಶ್ರಮದಿಂದ ಸ್ವಂತ ಉದ್ಯೋಗದಲ್ಲಿ ಯಶಸ್ಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts