More

    ಕ್ಷೇತ್ರ ಕಾರ್ಮಿಕರಿಗೆ ಮಾಸ್ಕ್ ವಿತರಣೆ

    ವಿಜಯಪುರ: ಸೂಕ್ತ ಸಮಯಕ್ಕೆ ಗುಣಮಟ್ಟದ ಬೀಜವನ್ನು ರೈತರ ಬಾಗಿಲಿಗೆ ಮುಟ್ಟುವ ಕೆಲಸ ಸುಗಮವಾಗಿ ಸಾಗಲು ಕೃಷಿ ಕಾರ್ಮಿಕರು ಹಾಗೂ ಮೇಲಧಿಕಾರಿಗಳು ಸತತ ಕೆಲಸ ಮಾಡಿದರೆ ಅನುಕೂಲವಾಗುವುದು ಎಂದು ಬೀಜ ಘಟಕದ ಮುಖ್ಯಸ್ಥ ಡಾ.ರಾಜಕುಮಾರ ಜೊಳ್ಳಿ ಹೇಳಿದರು.
    ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಆವರಣದಲ್ಲಿ ಕ್ಷೇತ್ರ ಕಾರ್ಮಿಕರಿಗೆ ಸೋಮವಾರ ಮಾಸ್ಕ್ ಹಾಗೂ ಕೈಗವಸು ವಿತರಿಸಿ ಅವರು ಮಾತನಾಡಿದರು.

    ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಬೀಜ ಘಟಕದಿಂದ ರೈತರ ಸಹಭಾಗಿತ್ವದಲ್ಲಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಬೀಜೋತ್ಪಾದನೆ ತೆಗೆದುಕೊಳ್ಳಲಾಗುತ್ತಿದ್ದು, ರೈತರಿಗೆ ಬೀಜೋತ್ಪಾದನೆ ತೆಗೆದುಕೊಳ್ಳುವ ಬೀಜ ಘಟಕದಿಂದ ಮೂಲ ಬೀಜ ಪೂರೈಸಿ, ಆ ಬೀಜದಿಂದ ರೈತರು ತಮ್ಮ ಜಮೀನಿನಲ್ಲಿ ಪ್ರಾಮಾಣಿತ ಬೀಜೋತ್ಪಾದನೆ ತೆಗೆದುಕೊಳ್ಳುತ್ತಾರೆ. ಬೀಜೋತ್ಪಾದನೆ ತಾಕುಗಳನ್ನು ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ ತಾಕುಗಳಿಗೆ ಭೇಟಿ ನೀಡಿ ಪ್ರಮಾಣಿಕರಿಸುತ್ತದೆ. ನಂತರ ರೈತರು ಬೆಳೆ ಕಟಾವು ಮಾಡಿ ಕೊಯ್ಲಿನ ನಂತರ ಮರಳಿ ಈ ಘಟಕಕ್ಕೆ ಕೊಡುತ್ತಾರೆ. ಅದಕ್ಕೆ ಅನುಗುಣವಾಗಿ ರೈತರಿಗೆ ಹಣ ಪಾವತಿಸಲಾಗುತ್ತದೆ. ರೈತರಿಂದ ಬಂದಂಥ ಬೀಜಗಳಲ್ಲಿ ತೇವಾಂಶ ಹೆಚ್ಚಾಗಿರುವುದು. ಇತರೆ ತಳಿಗಳು ಕೂಡಿರುವುದು ಅನೇಕ ಜಡ ಪದಾರ್ಥ, ಕಲ್ಲು ಮತ್ತು ಮಣ್ಣು ಕೂಡಿರುವುದು. ಆ ಬೀಜದಲ್ಲಿ ಅತೀ ದೊಡ್ಡ ಹಾಗೂ ಅತೀ ಸಣ್ಣ ಗಾತ್ರದ ಬೀಜಗಳಿಂದ ಕೂಡಿರುತ್ತದೆ. ಆ ಬೀಜವನ್ನು ಬೀಜ ಸಂಸ್ಕರಣಾ ಕೇಂದ್ರದಲ್ಲಿ ಸ್ವಚ್ಛತೆ, ಒಣಗಿಸುವುದು, ಮೌಲ್ಯ ಹೆಚ್ಚಳ, ಬೀಜ ವರ್ಗೀಕರಣ ಮತ್ತು ಸೂಕ್ತ ಧಾರಕಗಳಲ್ಲಿ ಬೀಜಗಳನ್ನು ತುಂಬಿ ಬೀಜೋಪಚಾರ ಕೈಗೊಳ್ಳಲಾಗುವುದು. ಈ ಸಂದರ್ಭದಲ್ಲಿ ಕೃಷಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುತ್ತಾರೆ. ಅವರ ಸುರಕ್ಷತೆ ಮತ್ತು ಆರೋಗ್ಯ ದೃಷ್ಟಿಯಿಂದ ಮಾಸ್ಕ್ ಹಾಗೂ ಕೈಗವಸು ಅವಶ್ಯಕತೆಯಿರುವುದರಿಂದ ಅವರಿಗೆ ತಿಳಿಹೇಳಿ ವಿತರಿಸಲಾಯಿತು.

    ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ಮಾತನಾಡಿ, ಕರೊನಾ ಹಾವಳಿಯಿಂದಾಗಿ ಎಲ್ಲ ಕೆಲಸಗಳು ಸ್ಥಗಿತಗೊಂಡಿದ್ದು, ಸದ್ಯಕ್ಕೆ ಸರ್ಕಾರ ಕೃಷಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಅನುಮತಿ ನೀಡಿದೆ. ಅದರಂತೆ ಕ್ಷೇತ್ರ ಕಾರ್ಮಿಕರು ಸ್ವಚ್ಛತೆಯಿಂದ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ತಮ್ಮ ಗ್ರಾಮಗಳಲ್ಲೂ ಕೂಡ ಇತರರಿಗೆ ತಿಳಿಸಬೇಕು ಎಂದರು.

    ಮುಖ್ಯ ವಿಜ್ಞಾನಿ ಡಾ.ಎಂ.ಎಸ್.ಶಿರಹಟ್ಟಿ, ಕೀಟ ವಿಜ್ಞಾನಿ ಡಾ. ಎಸ್.ಎಸ್. ಕರಭಂಟನಾಳ, ಸಿಬ್ಬಂದಿ ಜಿ.ವಿ. ಹಿರೇಗೌಡರ, ವೈ.ಕೆ. ಬಾವಿಕಟ್ಟಿ, ಮಹಾದೇವ ನುಚ್ಚಿ, ಎಲ್.ಎಸ್. ಚಂದುಗೋಳ, ಮಲ್ಲು ಪಡನಾಡ, ಬಸು ಸುಣ್ಣದಗುಡಿ, ಎಸ್.ಜಿ. ಬೊಮ್ಮನಹಳ್ಳಿ, ಧ್ಯಾಮನಗೌಡ ಬಿರಾದಾರ, ಪರಮಪ್ಪ ತಳವಾರ, ಯಲ್ಲಪ್ಪ ಬಿರಾದರ, ಮಹಾದೇವ ಸಾರವಾಡ, ಮಲ್ಲು ಕಗ್ಗೋಡ ಉಪಸ್ಥಿತರಿದ್ದರು.

    ಕ್ಷೇತ್ರ ಕಾರ್ಮಿಕರಿಗೆ ಮಾಸ್ಕ್ ವಿತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts