More

    ಕಾರಜೋಳ ಗ್ರಾಪಂ ಕಾರ್ಯದರ್ಶಿ ‘ಕರಾ’ಮತ್ತು

    ವಿಜಯಪುರ: ಸೇವೆಗೆ ಗೈರಾಗುವುದಲ್ಲದೆ, ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡಿಕೊಂಡಿರುವ ಗ್ರೇಡ್-2 ಕಾರ್ಯದರ್ಶಿ ಕಾರ್ಯವೈಖರಿ ಆಡಳಿತ ವ್ಯವಸ್ಥೆಗೆ ಸವಾಲಾಗಿದೆ.

    ಹೌದು, ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಕಾರಜೋಳ ಗ್ರಾಪಂನ ಗ್ರೇಡ್-2 ಕಾರ್ಯದರ್ಶಿ ಸಂಗಪ್ಪ ಎಸ್. ಪಡಸಲಗಿ ಕಾರ್ಯವೈಖರಿ ನಿಜಕ್ಕೂ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ. ಸಾರ್ವಜನಿಕರಿಂದ ಸಂಗ್ರಹಿಸಲಾದ ತೆರಿಗೆ ಹಣವನ್ನು ವಸೂಲಿ ಕ್ಲರ್ಕ್ ಹಾಗೂ ಗ್ರೇಡ್-2 ಕಾರ್ಯದರ್ಶಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ನೋಟಿಸ್ ಸಹ ನೀಡಿದ್ದಾರೆ. ಆದರೆ, ಈವರೆಗೂ ಹಣ ಪಾವತಿಸಿಲ್ಲವೆಂಬುದು ಸದಸ್ಯರ ಆರೋಪ.

    ಒಟ್ಟು 89,871ರೂ. ತೆರಿಗೆ ಹಣ ದುರ್ಬಳಕೆಯಾಗಿದ್ದು, ಇದರಲ್ಲಿ ಕ್ಲರ್ಕ್ ಮತ್ತು ಗ್ರೇಡ್-2 ಕಾರ್ಯದರ್ಶಿಯ ಕೈವಾಡ ಇರುವುದು ಗೊತ್ತಾಗಿದೆ. ಹೀಗಾಗಿ ಕೂಡಲೇ ಹಣ ಸಂದಾಯ ಮಾಡುವಂತೆ ಪಿಡಿಒ ನೋಟಿಸ್‌ನಲ್ಲಿ ತಿಳಿಸಿದ್ದಾರೆ.ಅಲ್ಲದೆ, ಸದರಿ ನೋಟಿಸ್ ಪ್ರತಿಯನ್ನು ಮೇಲಧಿಕಾರಿಗಳ ಅವಗಾಹನೆಗೂ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

    ಸದರಿ ಗ್ರೇಡ್-2 ಕಾರ್ಯದರ್ಶಿ ಸೇವೆಗಿಂತ ಹೆಚ್ಚಾಗಿ ರಾಜಕೀಯ ಮಾಡುತ್ತಾರೆಂಬ ಆರೋಪ ಹೆಚ್ಚಿದೆ. ಸರ್ಕಾರಿ ಕೆಲಸಗಳಿಗಿಂತ ಸರ್ಕಾರೇತರ ಚಟುವಟಿಕೆಯಲ್ಲಿಯೇ ಕಾಲ ಕಳೆಯುತ್ತಾರೆ. ರಾಜಕೀಯ ಪಕ್ಷಗಳ ಪ್ರತಿನಿಧಿಯಂತೆ ವರ್ತಿಸುತ್ತಾರೆ. ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಪಂಚಾಯಿತಿಯಿಂದ ಎತ್ತಂಗಡಿ ಮಾಡಬೇಕು. ಇಲ್ಲವಾದಲ್ಲಿ ಮುಂದಾಗಬಹುದಾದ ತೊಂದರೆಗಳಿಗೆ ಮೇಲಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂಬುದು ಗ್ರಾಮಸ್ಥರ ಆಕ್ರೋಶ ಭರಿತ ಎಚ್ಚರಿಕೆಯಾಗಿದೆ.

    ತೆರಿಗೆ ಹಣ ದುರ್ಬಳಕೆಯಾಗಿದ್ದು ನಿಜ. ಈ ಬಗ್ಗೆ ಈಗಾಗಲೇ ನೋಟಿಸ್ ಸಹ ನೀಡಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಮುಂದಿನ ಕ್ರಮ ಅವರೇ ಕೈಗೊಳ್ಳಬೇಕು.
    ಜಿ.ಬಿ. ಕಲ್ಲವ್ವಗೋಳ, ಪಿಡಿಒ

    ಗ್ರೇಡ್-2 ಕಾರ್ಯದರ್ಶಿ ಪಂಚಾಯಿತಿಗೆ ಸರಿಯಾಗಿ ಬರಲ್ಲ. ತಿಂಗಳಿಗೊಮ್ಮೆ ಬಂದು ಸಹಿ ಮಾಡುತ್ತಾರೆ. ತಾವೇ ಗುತ್ತಿಗೆ ಹಿಡಿದು ಕೆಲಸ ಮಾಡಿಸುತ್ತಾರೆ. ಪಕ್ಷ ರಾಜಕಾರಣ ಮಾಡಿಕೊಂಡು ತಿರುಗುತ್ತಿದ್ದು, ಇವರನ್ನು ಕೂಡಲೇ ಬದಲಿಸಬೇಕು.
    ಲಕ್ಕವ್ವ ನೀಲಪ್ಪ ಗೋಡೆಕರ, ಗ್ರಾಪಂ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts