More

    ಗೌರವಧನ ಹೆಚ್ಚಳಕ್ಕೆ ಆಗ್ರಹ

    ವಿಜಯಪುರ: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಅಕ್ಷರ ದಾಸೋಹ ಕಾರ್ಯಕರ್ತೆಯರು ಗುರುವಾರ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿ ಆಯಾ ತಾಲೂಕುಗಳ ತಹಸೀಲ್ದಾರ್ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಕರೊನಾ ಸೋಂಕಿನ ಹಿನ್ನೆೆಲೆಯಲ್ಲಿ ಶಾಲೆಗಳಿಗೆ ರಜೆ ಕೊಟ್ಟರೂ ಶಾಲಾ ಆವರಣ ಸ್ವಚ್ಚಗೊಳಿಸುವುದರಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಇಂದಿಗೂ ಶಾಲೆಗಳು ಸ್ವಚ್ಛವಾಗಿವೆಂದರೆ ಅದು ಅಕ್ಷರ ದಾಸೋಹ ಕಾರ್ಮಿಕರ ಶ್ರಮವಾಗಿದೆ. ಆದರೆ ಕೇಂದ್ರ-ರಾಜ್ಯ ಸರ್ಕಾರಗಳು ಅವರಿಗೆ ಕೊಡುತ್ತಿರುವ ಗೌರವಧನ ಕೇವಲ 1100 ರೂ. ಮತ್ತು 1500 ರೂ. ಮಾತ್ರ. ಐದು ವರ್ಷಗಳಿಂದ ಅವರ ಗೌರವಧನ ಏರಿಕೆ ಆಗಿಲ್ಲ. ಹಾಗಾಗಿ ಮಕ್ಕಳ ಶಿಕ್ಷಣ,ಆರೋಗ್ಯ, ಮನೆ ಬಾಡಿಗೆ ಇತ್ಯಾದಿ ಒಟ್ಟಾರೆ ಕುಟುಂಬ ನಿರ್ವಹಣೆ ಅಸಾಧ್ಯವೆಂಬಂತಾಗಿದೆ. ಅವರಿಗೆ ನೀಡುತ್ತಿರುವ ಗೌರವಧನವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

    ಸಂಘದ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಮಕ್ಕಳಿಗೆ ಊಟ, ಹಾಲು ನೀಡುವ ಕೆಲಸಗಳಷ್ಟೆ ಅಲ್ಲದೆ, ಇಡೀ ಶಾಲೆ ಆವರಣದ ಸ್ವಚ್ಛತೆ, ಕೈತೋಟದ ಕೆಲಸ ಇತ್ಯಾದಿ ನಿರ್ವಹಣೆ ಕೆಲಸಗಳನ್ನು ಕೂಡ ಮಾಡುವ ಅಕ್ಷರ ದಾಸೋಹ ಕಾರ್ಯಕರ್ತೆಯರಿಗೆ ಗೌರವಧನ ಬಿಡುಗಡೆ ಆಗಿಲ್ಲ. ಕೂಡಲೇ ಬಾಕಿ ಇರುವ ಗೌರವ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಶಶಿಕಲಾ ಮ್ಯಾಗೇರಿ, ಗಂಗೂಬಾಯಿ ಉಳ್ಳಾಗಡ್ಡಿ, ಬಸಮ್ಮ ಬೇವಿನಗಿಡದ, ಪ್ರತಿಭಾ ಪೆಂಟದ, ಸಂಗೀತಾ ವೇದಾಕರ, ಗಂಗವ್ವ ಗುಡಿಗೆನ್ನವರ, ಮಹಾದೇವಿ ಜೈನಾಪೂರ, ರಾಜಶ್ರೀ ಮಾಲಗಾರ, ಸರೋಜಿನಿ ಕುಂಬಾರ, ಸವಿತಾ ತಳವಾರ ಮುಂತಾದವರು ಭಾಗವಹಿಸಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts