More

    ಬದುಕಿನ ಪಾಠ ಕಲಿಸುವುದೇ ನಿಜವಾದ ಶಿಕ್ಷಣ

    ವಿಜಯಪುರ: ಶಿಕ್ಷಣ ಎಂದರೆ ಕೇವಲ ಅಕ್ಷರಾಭ್ಯಾಸವಲ್ಲ. ಕೇವಲ ಓದು-ಬರಹಕ್ಕೆ ಮಾತ್ರ ಶಿಕ್ಷಣ ಸೀಮಿತವಲ್ಲ. ಬದುಕು ಕಟ್ಟಿಕೊಳ್ಳುವ ಬಗೆ ಹೇಗೆಂಬುದು ತಿಳಿಸುವುದೇ ನಿಜವಾದ ಶಿಕ್ಷಣ ಎಂದು ಗ್ರಾಪಂ ಸದಸ್ಯ ಮನೋಜಗೌಡ ಪಾಟೀಲ ಹೇಳಿದರು.

    ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಶಾಂತಿ ಸಂದೇಶ ಶಿಕ್ಷಣ ಸಂಸ್ಥೆಯ ಪ್ರಾರ್ಥನಾ ಶಾಲೆಯ ವಾರ್ಷಿಕೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಇಂದು ಶಿಕ್ಷಣ ಅಂಕಗಳಿಸಿ ನೌಕರಿ ಹಿಡಿಯುವ ಸಾಧನವಾಗಿದೆ. ಪ್ರತಿಯೊಬ್ಬರೂ ಅಂಕ ಗಳಿಕೆ ಹಿಂದೆ ಬೀಳುತ್ತಿದ್ದಾರೆ. ವಾಸ್ತವದಲ್ಲಿ ಅದೊಂದೇ ಶಿಕ್ಷಣ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ, ಬದುಕಲು ಬೇಕಾದ ಕಲೆಯನ್ನು ಕಲಿಸುವುದೇ ನಿಜವಾದ ಶಿಕ್ಷಣ ಎಂದರು.

    ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಸಿದ್ದರಾಯ ಭಾವಿಕಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಸ್ಥಾಪಿತಗೊಳ್ಳಬೇಕು. ಗ್ರಾಮೀಣ ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕೆಂದರು.

    ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ, ಡಾ. ಶಿವಕುಮಾರ ಹಿರೇಮಠ, ಮಹ್ಮದ್ ಪಟೇಲ ಬಗಲಿ, ಬಾಳು ಶಿರಶ್ಯಾಡ, ಅರವಿಂದ ಯಳಸಂಗಿ, ಎಂ.ಸಿ. ಮುಲ್ಲಾ ಮಾತನಾಡಿದರು.

    ನಜೀರ ಗುಬ್ಯಾಡ, ಬುಡ್ಡೇಸಾಬ ಪ್ಯಾಟಿ, ಶಿಕ್ಷಕರಾದ ಐ.ಎಸ್. ಮಾಶ್ಯಾಳ ಮತ್ತಿತರರಿದ್ದರು. ಸಂಸ್ಥೆ ಅಧ್ಯಕ್ಷ ಎಂ.ಎ. ಸೌದಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಬೀಳಗಿಮಠ ನಿರೂಪಿಸಿದರು. ಅದೃಶ್ಯಪ್ಪ ವಾಲಿ ವಂದಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts