More

    ರೈತ ವಿರೋಧಿ ಕಾನೂನು ರದ್ದುಪಡಿಸಲು ಆಗ್ರಹ

    ವಿಜಯಪುರ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕರೆಯ ಮೇರೆಗೆ ಶುಕ್ರವಾರ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
    ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಅಖಂಡ ಕರ್ನಾಟಕ ರೈತ ಸಂಘ, ಉತ್ತರ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಮಹಾತ್ಮ ಬಸವೇಶ್ವರ, ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ಮುಖ್ಯ ಅಂಚೆ ಕಚೇರಿಗೆ ತೆರಳಿ ಅಲ್ಲಿ ಪ್ರತಿಭಟಿಸಲಾಯಿತು.
    ಮೆರವಣಿಗೆ ಉದ್ದಕ್ಕೂ ಭೂ ಸುಧಾರಣೆ ತಿದ್ದುಪಡಿ ಕಾನೂನು ರದ್ದುಪಡಿಸಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಸಾರ್ವಜನಿಕ ನಿಯಂತ್ರಣ ತಿದ್ದುಪಡಿ ಕಾನೂನು ರದ್ದು ಪಡಿಸಲು ಆಗ್ರಹಿಸಿ ಘೋಷಣೆ ಕೂಗಿದರು.

    ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್-19 ಸಂದರ್ಭವನ್ನು ಬಳಸಿಕೊಂಡು ಜನವಿರೋಧಿ ನೀತಿ ಜಾರಿಗೊಳಿಸಿದೆ. ಹೋರಾಟಕ್ಕೂ ಅವಕಾಶ ಕೊಡದೇ ಸರ್ವಾಧಿಕಾರಿ ಧೋರಣೆ ಮೆರೆದಿದೆ. ರೈತ ವಿರೋಧಿ ನೀತಿ ಜಾರಿಗೆ ತಂದು ಇಡೀ ರೈತ ಕುಲ ಹಾಗೂ ಕೃಷಿ ಕ್ಷೇತ್ರದ ನಾಶಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

    ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಶಕ್ತಿಕುಮಾರ, ಅಣ್ಣಾರಾಯ ಈಳಗೇರ, ಬಾಳು ಜೇವೂರ ಮುಂತಾದವರು ಮಾತನಾಡಿ, ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು. ಅಂಚೆ ಕಚೇರಿ ಮುಖ್ಯ ಅಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
    ಸುರೇಖಾ ರಜಪೂತ, ಸಲೀಂ ನಾಯ್ಕೋಡಿ, ಶ್ರೀಮಂತ ಮರಾಠೆ, ಪರಶುರಾಮ ಮಂಟೂರ, ಸಿದ್ರಾಮ ಬಂಗಾರಿ, ರಾಜು ರಣದೇವಿ, ರಾಹುಲ ಕುಬಕಡ್ಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts