More

    ಸೆಟ್‌ಲೈಟ್ ಬಸ್‌ನಿಲ್ದಾಣದಿಂದ ಸಂಚಾರ ಸುಗಮ

    ವಿಜಯಪುರ : ನಗರದ ಗೋದಾವರಿ ಹೋಟೆಲ್ ಬಳಿಯ ಸೆಟ್‌ಲೈಟ್ ಬಸ್ ನಿಲ್ದಾಣದಿಂದ ಸಂಚಾರ ದಟ್ಟಣೆ ಅತ್ಯಂತ ಕಡಿಮೆಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಂತೋಷ ವ್ಯಕ್ತಪಡಿಸಿದರು.

    ವಿಜಯಪುರದ ಅಥಣಿ ರಸ್ತೆಯಲ್ಲಿ ನೂತವಾಗಿ ನಿರ್ಮಿಸಲಾಗಿರುವ ಸೆಟ್‌ಲೈಟ್ ಬಸ್ ನಿಲ್ದಾಣದಿಂದ ಕೇಂದ್ರ ಬಸ್ ನಿಲ್ದಾಣದ ವರೆಗೆ ಬಸ್ ಸಂಚಾರ ಸೇವೆಗೆ ಭಾನುವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

    ವಿಜಯಪುರದಲ್ಲಿ ಸೆಟ್‌ಲೈಟ್ ಬಸ್ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ನನ್ನ ಕನಸಾಗಿತ್ತು, ಈ ಕನಸಿಗೆ ಅನೇಕ ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ. ಇದೀಗ ಕನಸು ಸಕಾರಗೊಂಡಿದೆ. ಸೆಟ್‌ಲೈಟ್ ಬಸ್ ನಿಲ್ದಾಣದಿಂದಾಗಿ ಜತ್ತ, ಸಾಂಗ್ಲಿ, ಬೆಳಗಾವಿ, ಅಥಣಿ ಭಾಗದಿಂದ ಬರುವ ನೂರಾರು ವಾಹನಗಳು ನಗರಕ್ಕೆ ಪ್ರವೇಶಿಸದೆ ಇಲ್ಲಿಯೆ ಪ್ರಯಾಣಿಕರನ್ನು ಇಳಿಸುತ್ತಿವೆ. ಹೀಗಾಗಿ ನೂರಾರು ವಾಹನಗಳು ನಗರ ಪ್ರವೇಶ ಕಡಿಮೆಯಾಗಿದ್ದು, ಇದರಿಂದಾಗಿ ಸಂಚಾರ ದಟ್ಟಣೆ ಅತ್ಯಂತ ಕಡಿಮೆಯಾಗಿದೆ. ಸಾರ್ವಜನಿಕರು ಕೂಡ ಸಂತೋಷಪಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿದ್ಧಸಿರಿ ವತಿಯಿಂದ ಶುದ್ಧ ಕುಡಿಯವ ನೀರಿನ ಘಟಕ, ಎಸ್-ಹೈಪರ್ ಮಾರ್ಟ್ ವತಿಯಿಂದ ಪ್ರಯಾಣಿಕರಿಗಾಗಿ ಸ್ಟೀಲ್ ಕುರ್ಚಿಗಳನ್ನು ಕೊಡುಗೆಯಾಗಿ ಬಸ್‌ನಿಲ್ದಾಣದಲ್ಲಿ ಅಳವಡಿಸಲಾಗಿದೆ. ನೂತನ ಬಸ್ ನಿಲ್ದಾಣದ ಸ್ವಚ್ಛತೆಗೆ ಪ್ರಧಾನ ಆದ್ಯತೆ ನೀಡಬೇಕು. ಎಲ್ಲಿ ಬೇಕಾದಲ್ಲಿ ಕಸವನ್ನು ಚೆಲ್ಲಬಾರದು. ಇದು ನಿಮ್ಮ ಆಸ್ತಿ, ಅತ್ಯಂತ ಸ್ವಚ್ಛ ರೀತಿಯಲ್ಲಿ ಬಸ್ ನಿಲ್ದಾಣವನ್ನು ನಿರ್ವಹಣೆ ಮಾಡಬೇಕು ಪ್ರಯಾಣಿಕರಲ್ಲಿ ಮನವಿ ಮಾಡಿದರು.

    ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ ಮಾತನಾಡಿ, ಸೆಟಲೈಟ್ ಬಸ್ ನಿಲ್ದಾಣದಿಂದಾಗಿ ನಗರ ಸಾರಿಗೆ ಸಂಚಾರದಟ್ಟಣೆ ಹಾಗೂ ಅಪಘಾತಗಳು ಮುಂಬರುವ ದಿನಗಳಲ್ಲಿ ಕಡಿಮೆಯಾಗುತ್ತವೆ. ಸೊಲ್ಲಾಪುರ ಹೊಗುವ ಎಲ್ಲಾ ವಾಹನಗಳು ಈ ಬಸ್ ನಿಲಾಣದಿಂದ ಈಗ ಆರಂಭಗೊಂಡಿವೆ ಎಂದರು.

    ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮುಖಂಡರಾದ ಲಕ್ಷ್ಮ್ಮಣ ಜಾಧವ, ವಿಕ್ರಮ್ ಗಾಯಕವಾಡ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಸುರೇಶ್‌ಜಾಧವ, ಪ್ರಕಾಶಚವಾಣ್, ಉಮೇಶ ವಂದಾಲ, ದಾದಾಸಾಹೇಬ ಬಾಗಾಯತ್, ವಿವೇಕ ತಾವರಗೇರಿ, ಪಾಂಡುಸಾಹುಕಾರ ದೊಡ್ಡಮನಿ, ಬಸವರಾಜ ಗೊಳಸಂಗಿ, ನಾಗರಾಜ ಮುಳವಾಡ, ರಾಜಶೇಖರ ಭಜಂತ್ರಿ, ಕೃಷ್ಣಾ ಗೊನ್ಹಾಳಕರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts