More

    ಶಿಕ್ಷಕರು ಜ್ಞಾನ ವಿಸ್ತರಿಸಿಕೊಳ್ಳುವುದು ಅಗತ್ಯ ಬೆಳಗಾವಿ

    ಬೆಳಗಾವಿ: ಸಂಶೋಧನಾ ಕ್ಷೇತ್ರಕ್ಕೆ ಅನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ ವಿಸ್ತರಿಸಿಕೊಳ್ಳುವುದು ತುಂಬ ಅಗತ್ಯ ಎಂದು ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಫ್ರಾಮಾಕಾಲಜಿ ವಿಭಾಗದ ಮುಖ್ಯಸ್ಥೆ ಡಾ.ನಯನಾ ಹಾಶಿಲ್ಕರ್ ಹೇಳಿದರು.

    ನಗರದ ಕೆಎಲ್ಇ ಔಷಧ ವಿಜ್ಞಾನ ಕಾಲೇಜಿನ ಫ್ರಾಮಾಕಾಲಜಿ ವಿಭಾಗದಿಂದ ‘ರೋಬಸ್ಟ್ ರೆಪ್ರೋಡ್ಯೂಸಿಬಲ್ ಪ್ರಿಕ್ಲಿನಿಕಲ್ ರಿಸರ್ಚ್’ ವಿಷಯದ ಕುರಿತು ಹಮ್ಮಿಕೊಂಡಿರುವ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ, ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮದ ಮಹತ್ವ ವಿವರಿಸಿದರು.

    ಕೆಎಲ್‌ಇ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಸುನೀಲ್ ಜಲಾಲಪುರೆ ಅವರ ನಿರ್ದೇಶನ, ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಭಾಗದ ಮುಖ್ಯಸ್ಥರಾದ ಡಾ. ನಯೀಮ್ ಖತೀಬ್, ಸಹ ಪ್ರಾಧ್ಯಾಪಕ ಪ್ರಕಾಶ ಬಿರಾದರ ಹಾಗೂ ಸಿಬ್ಬಂದಿ ಇದ್ದರು. ಮಾನ್ಸಿ ಕುಪೇಕರ ನಿರೂಪಿಸಿದರು. ಸಹ ಪ್ರಾಧ್ಯಾಪಕ ಪ್ರಕಾಶ ಬಿರಾದರ ವಂದಿಸಿದರು.

    ಡಿ.11ರಿಂದ ಆರಂಭವಾಗಿರುವ ಕಾರ್ಯಕ್ರಮ ಡಿ.16ರವರೆ ನಡೆಯಲಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಅಧಿವೇಶನಗಳನ್ನು ಒಳಗೊಂಡಿದೆ. ಆನ್‌ಲೈನ್ ಅಧಿವೇಶನದಲ್ಲಿ ವಿವಿಧ ವಿಭಾಗಗಳ ಸಂಪನ್ಮೂಲ ವ್ಯಕಿಗಳಾದ ಡಾ.ಪಿ.ಎ.ಪಾಟಿಲ, ಡಾ.ವೀರೇಶ ಬಂಟಾಲ, ಡಾ.ಟಿ.ಕೆ.ಪ್ರವೀಣ, ಪ್ರಕಾಶ ಬಿರಾದರ, ಡಾ.ವಿರೂಪಾಕ್ಷ ಬಸ್ತಿಕರ, ಡಾ.ರಾಜೇಂದ್ರ, ಡಾ.ವಿಶಂಭರ ಭಂಡಾರೆ, ಡಾ.ಯೋಗಿಂದ್ರ ನಾಯಕ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

    ಆಫ್‌ಲೈನ್ ಅಧಿವೇಶನದಲ್ಲಿ ಆಡ್ ಇನ್ಸ್ಟ್ರುಮೆಂಟ್ ವ್ಯವಸ್ಥಾಪಕರಾದ ಸುಮಂತ ಭಟ್ ಹಲವು ಅತ್ಯಾಧುನಿಕ ಉಪಕರಣಗಳ ಬಗ್ಗೆ ತರಬೇತಿ ನೀಡಿದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಫಾರ್ಮಸಿ ಸಂಸ್ಥೆಗಳ ಸುಮಾರು 30 ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts