More

    ನ್ಯಾಯ ಸಿಗದಿದ್ದರೆ ಉಪವಾಸ ಸತ್ಯಾಗ್ರಹಕ್ಕೆ ಅಣಿ

    ವಿಜಯಪುರ: ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಹಣ ತೊಡಗಿಸಿ ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ನಡೆಯುತ್ತಿರುವ ಧರಣಿ ಮುಂದುವರಿದಿದ್ದು, ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಕಳೆದೊಂದು ವಾರದಿಂದ ಜಿಲ್ಲಾ ಸಹಕಾರಿ ಸಂಘಗಗಳ ಉಪನಿಬಂಧಕರ ಕಚೇರಿ ಎದುರು ಗ್ರಾಹಕರು ಧರಣಿ ನಡೆಸುತ್ತಿದ್ದಾರೆ. ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಮಹಾತ್ಮ ಬಸವೇಶ್ವರ ವೃತ್ತದಿಂದ, ಗಾಂಧಿ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರಗೆ ಮನವಿ ಸಲ್ಲಿಸಲಾಯಿತು.
    ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಜಿಲ್ಲೆಯ ಕೆಲವೊಂದು ಶಾಖೆಗಳಲ್ಲಿ ಮುರುಗೇಶ ನಿರಾಣಿಯವರ ಹೆಸರನ್ನು ನಂಬಿ ಕೋಟ್ಯಂತರ ರೂ. ತೊಡಗಿಸಿದ್ದಾರೆ. ಆದರೆ, ಅವಧಿ ಮುಗಿದರೂ ಈವರೆಗೆ ಹಣ ಹಿಂತಿರುಗಿಸಿಲ್ಲ. ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದರು.
    ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ, ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಸುರೇಖಾ ರಜಪೂತ ಮಾತನಾಡಿ, ಈ ವಿಷಯವಾಗಿ ಇಲಾಖೆಗಳು ಮೊಂಡುತನ ಮುಂದುವರಿಸಿದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.
    ಮುಖಂಡರಾದ ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಈಶ್ವರಪ್ಪ ಬಿ.ಸಾರವಾಡ, ರುದ್ರಗೌಡ ಬಿರಾದಾರ, ಬಿ.ಬಿ. ಇಂಗಳೆ, ಎಸ್.ಎನ್. ಇಟಗಿ, ಕಾಸು ಮಾಲಗಾರ, ಬಿ.ಎಂ. ಪಡಶೆಟ್ಟಿ, ಬಿ.ಬಿ. ಕುಲಕರ್ಣಿ, ಕೆ.ಡಿ. ನರಗುಂದ, ಎಸ್.ಎಸ್. ಕೋಳಕೂರ, ಎಚ್.ಎಸ್. ತೊದಲಬಾಗಿ, ಹರೀಶ ಮೋಟೆಕಾರ, ಬಸವರಾಜ ಬಾಡಗಿ, ಗುಂಡು ಲಮಾಣಿ, ಎಸ್.ಎಂ. ಕಬಾಡೆ, ಎನ್.ಕೆ. ಮನಗೊಂಡ, ಎಸ್.ಎಸ್. ಮುಂಡಾಸ, ಸಚಿನ ಬಳ್ಳಾರಿ, ಲಕ್ಷ್ಮಿ ಮನಗೂಳಿ, ರೇಣುಕಾ ಹಾವೇರಿ, ಯಂಕವ್ವ ಸಿಂಪಿ, ಲಕ್ಷ್ಮಿಬಾಯಿ ಶಿರಟ್ಟಿ, ಐ.ಜಿ. ದಿನ್ನಿಮನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts