More

    ಸಂಚಾರಕ್ಕೆ ಅಡಚಣೆಯಾದರೆ ಸಹಕರಿಸಿ

    ವಿಜಯಪುರ : ವಿವಿಧ ಯೋಜನೆಗಳ ಅಡಿಗಳಲ್ಲಿ ನಗರದ ಹಲವು ಕಡೆ ರಸ್ತೆ ಅಭಿವೃದ್ಧಿ, ಮರು ಡಾಂಬರೀಕರಣ, ಒಳಚರಂಡಿ ಕಾಮಗಾರಿಗಳು ನಡೆಯುತ್ತಿದ್ದು ಸಂಚಾರಕ್ಕೆ ಅಡಚಣೆಯಾದಲ್ಲಿ ನಾಗರಿಕರು ಸಹಕರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದ್ದಾರೆ.ನಗರದ ಬಾಗಲಕೋಟೆ ಕ್ರಾಸ್‌ನಿಂದ ಪಾಲಿಟೆಕ್ನಿಕ್ ಹಾಸ್ಟೇಲ್ ಪಕ್ಕದ ಕೋಟೆಗೋಡೆವರೆಗೆ ರಸ್ತೆ ಅಭಿವೃದ್ಧಿ, ಕೇಂದ್ರ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ಸರ್ಕಾರಿ ಪ್ರೌಢಶಾಲೆ ಗಾಂಧಿಚೌಕವರೆಗೆ ಸಿಸಿ ರಸ್ತೆ, ಕೇಂದ್ರ ಬಸ್ ನಿಲ್ದಾಣದಿಂದ ಜೋಡಗುಮ್ಮಟ ಮೂಲಕ ಹುತಾತ್ಮಾ ವೃತ್ತದ (ಮೀನಾಕ್ಷಿ ಚೌಕ) ವರೆಗೆ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ಮೇಲೆ ಪ್ರಿಕಾಸ್ಟ್ ಸ್ಲ್ಯಾಬ್ ಅಳವಡಿಕೆ, ಕೃಷ್ಣಾ ಭವನದಿಂದ (ಕರಿಗೌಡರ ಕಾಂಪ್ಲೆಕ್ಸ್) ತಾಜ್ ಬಾವಡಿವರೆಗಿನ ರಸ್ತೆ ಮರು ಡಾಂಬರೀಕರಣ, ನಗರದ ಆಶ್ರಮ ರಸ್ತೆಯ ಬಿಎಲ್ಡಿಇ ಆಸ್ಪತ್ರೆ ಕಾಂಪೌಂಡ್‌ನಿಂದ ಬಾಳಿ ಪರಸಿ ಅಡ್ಡೆ ವರೆಗಿನ ರಸ್ತೆ ಅಭಿವೃದ್ಧಿ, ನಗರದ ಸರಾಫ ಬಜಾರದ ಕಪಿಲ ಕಲೆಕ್ಷನ್‌ದಿಂದ ಹೆಡಗೆವಾರ ವೃತ್ತದ ಮುಖಾಂತರ ವಿಶಾಲ ಮೆಗಾಮಾರ್ಟ್ ವರೆಗೆ ರಸ್ತೆ ಅಭಿವೃದ್ಧಿ, ಗಾಂಧಿ ವೃತ್ತದಿಂದ ಸಿಂಡಿಕೇಟ್ ಬ್ಯಾಂಕ್‌ವರೆಗೆ ಮರು ಡಾಂಬರೀಕರಣ, ನಗರದ ಬಾಳಿ ಪರಸಿ ಅಡ್ಡೆಯಿಂದ ಮಹಾತ್ಮಾಗಾಂಧಿ ವೃತ್ತ ವರೆಗೆ ರಸ್ತೆ ಅಭಿವೃದ್ಧಿ, ಬಾಗಲಕೋಟೆ ರಸ್ತೆಗೆ ಹೊಂದಿಕೊಂಡು ಮಳೆ ನೀರು ಚರಂಡಿ ನಿರ್ಮಿಸುವುದು, ಕೆ.ಎಸ್.ಆರ್.ಟಿ.ಸಿ ಕೇಂದ್ರ ಬಸ್ ನಿಲ್ದಾಣದಿಂದ ಮರಾಠಿ ವಿದ್ಯಾಲಯ ಶಾಲೆಯ ವರೆಗೆ ರಸ್ತೆ ಅಭಿವೃದ್ಧಿ, ಬಬಲೇಶ್ವರ ನಾಕಾದಿಂದ ಅಡಕಿಗಲ್ಲಿ ಮುಖಾಂತರ ಕಾಳಿಕಾ ದೇವಸ್ಥಾನದ ಮೂಲಕ ಹುತಾತ್ಮ ವೃತ್ತದವರೆಗೆ ಸಿ.ಸಿ ರಸ್ತೆ, ಎ.ಡಿ.ಬಿ ಯಿಂದ ಬಿಟ್ಟುಹೋದ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು, ಕೆ.ಸಿ ನಗರದ ಡಿ.ಸಿ.ಸಿ ಬ್ಯಾಂಕ್ ಹೋಗುವ ರಸ್ತೆಯಿಂದ ಸಾಯಿ ಆಸ್ಪತ್ರೆ ಮೂಲಕ ಸೋಲಾಪೂರ ರಸ್ತೆಯ ವರೆಗೆ ಒಳಚರಂಡಿ ನಿರ್ಮಾಣ, ಶಾಹಾಪೇಟಿಯಿಂದ ಡಾ. ಬಿ.ಆರ್. ಅಂಬೇಡ್ಕರ ಭವನ ಮೂಲಕ ಸುಣಗಾರ ಗಲ್ಲಿಯ ಚಾಂದನಿ ಮಂಗಲ ಕಾರ್ಯಾಲಯದಿಂದ ಅಪ್ಸರಾ ಟಾಕೀಸ್ ವರೆಗೆ ಮಳೆ ನೀರು ಚರಂಡಿ ನಿರ್ಮಾಣ, ಲೋಕೋಪಯೋಗಿ ಕಚೇರಿಯಿಂದ ಗೋಲ ಗುಂಬಜ ವರೆಗಿನ ರಸ್ತೆಯ ತಗ್ಗು ಗುಂಡಿಗಳನ್ನು ತುಂಬುವುದು, ನಗರದ ಮುಖ್ಯ ರಸ್ತೆಗಳ ತಗ್ಗು ಗುಂಡಿಗಳನ್ನು ತುಂಬುವುದು ಸೇರಿದಂತೆ ನಗರಾದಾದ್ಯಂತ ಕಾಮಗಾರಿಗಳು ನಡೆಯುತ್ತಿದ್ದು, ಕೆಲವು ಪೂರ್ಣಗೊಂಡಿದ್ದರೆ, ಕೆಲವು ಪ್ರಗತಿಯಲ್ಲಿದೆ. ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts