More

    ವರ್ಷದಲ್ಲಿ ನೂರು ಉದ್ಯಾನಗಳ ಅಭಿವೃದ್ಧಿ

    ವಿಜಯಪುರ: ನಗರದ ವಾರ್ಡ್ ನಂ. 21ರ ತ್ರಿಮೂರ್ತಿ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ನಿರ್ಮಾಣಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

    ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಿಸಿದ ನಗರದ ವಿವಿಧ ವಾರ್ಡ್‌ಗಳ ಒಟ್ಟು 14 ಉದ್ಯಾನವನಗಳ ಅಭಿವೃದ್ಧಿಗೆ 251.48 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಏಕಕಾಲದಲ್ಲಿ ಭೂಮಿ ಪೂಜೆ ನೆರವೇರಿಸಿದರು.

    ನಗರಾಭಿವೃದ್ಧಿ ಪ್ರಾಧಿಕಾರದಿಂದ ಉದ್ಯಾನವನಗಳಲ್ಲಿ ಫೆನ್ಸಿಂಗ್, ವಾಕಿಂಗ್ ಟ್ರ್ಯಾಕ್ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಗರದ ಇಬ್ರಾಹಿಂಪುರದ ಹೆದ್ದಾರಿಗೆ ಹೊಂದಿಕೊಂಡಿರುವಂತಹ ಎಲ್ಲ ಬಡಾವಣೆಗಳಲ್ಲಿ ಒಳಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

    ನಗರಾಭಿವೃದ್ಧಿ ಪ್ರಾಧಿಕಾರದಿಂದ 27 ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮತ್ತೆ 45 ಉದ್ಯಾನವನಗಳಿಗೆ ಟೆಂಡರ್ ಕರೆಯಲಾಗಿದೆ. ಬಹುತೇಕ ಈ ಒಂದು ವರ್ಷದಲ್ಲಿ ನಗರದಲ್ಲಿ ನೂರು ಉದ್ಯಾನವನಗಳ ಅಭಿವೃದ್ಧಿ ಆಗಲಿವೆ ಎಂದರು.

    ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ಲಕ್ಷ್ಮಣ ಜಾಧವ, ಪ್ರೇಮಾನಂದ ಬಿರಾದಾರ, ಮಡಿವಾಳ ಯಳವಾರ, ಶ್ರೀನಿವಾಸ ಬೆಟಗೇರಿ, ಸಿದ್ದಣ ಸಾಯಗಾವಿ, ಡಾ. ಈರಣ್ಣ ತೊರವಿ, ಗಂಗಾಧರ ಬಾಗೇವಾಡಿ, ಶಂಕರ ಪಾಟೀಲ, ಬಾಬುಗೌಡ ಬಿರಾದಾರ, ಆರ್.ಎಸ್. ಬಾವಿಕಟ್ಟಿ, ಲಕ್ಷ್ಮಿ ಪಾಟೀಲ, ರಾಮನಗೌಡ ಬಾವಿಕಟ್ಟಿ, ಸಂತೋಷ ತಳಕೇರಿ, ರಾಜಶೇಖರ ಬಜಂತ್ರಿ, ಶರಣು ಕಾಖಂಡಕಿ, ನಾಗರಾಜ ಮುಳವಾಡ ಮತ್ತಿತರರಿದ್ದರು.

    ಲಕ್ಷ್ಮಿನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
    ನಗರದ ವಾರ್ಡ್ ನಂ. 21 ರ ಲಕ್ಷ್ಮಿ ನಗರದ ಆಂತರಿಕ ರಸ್ತೆಗಳು ಹಾಗೂ ಗಣೇಶ ನಗರ ಬಸ್ ನಿಲ್ದಾಣದಿಂದ ಮಹಾಲಕ್ಷ್ಮಿ ಗುಡಿ ಮೂಲಕ ಸರ್ಕಾರಿ ಶಾಲೆ ನಂ.1 ರವರೆಗೆ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ಚನಬಸಯ್ಯ ಸಿ. ಹಿರೇಮಠ, ಗುರುದೇವ ಅಂಗಡಿ, ಅನಿಲ ಜಾಧವ, ಜಿ.ಎಸ್. ಬಳ್ಳೂರ, ಎಂ.ಕೆ. ಮಠ, ಶ್ರೀಹರಿ ಗೊಳಸಂಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts