More

    ಕನ್ನಡ ಹೋರಾಟಗಾರರ ಬಂಧನ-ಬಿಡುಗಡೆ

    ವಿಜಯಪುರ: ಬೆಳಗಾವಿಯಲ್ಲಿ ಪದೇ ಪದೇ ಪುಂಡಾಟಿಕೆ ಮೆರೆಯುತ್ತಿರುವ ಎಂಸಿಎಸ್ ಸಂಘಟನೆ ನಿಷೇಧಿಸಲು ಆಗ್ರಹಿಸಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಪದಾಧಿಕಾರಿಗಳನ್ನು ಪೊಲೀಸರು ಕೆಲಕಾಲ ಬಂಧಿಸಿ ಬಿಡುಗಡೆಗೊಳಿಸಿದರು.

    ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಕೆಲ ಕಾಲ ಪ್ರತಿಭಟನೆ ನಡೆಸಿದರಲ್ಲದೆ, ಎಂಸಿಎಸ್ ವಿರುದ್ಧ ಘೋಷಣೆ ಕೂಗಿದರು.

    ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ನೇತೃತ್ವ ವಹಿಸಿ ಮಾತನಾಡಿ, ಎಂಇಎಸ್ ಪುಂಡಾಟಿಕೆ ದಿನೇ ದಿನೆ ಹೆಚ್ಚುತ್ತಿವೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಿಶ್ವ ಗುರು ಬಸವಣ್ಣ, ಶಿವಾಜಿ ಮೂರ್ತಿಗೆ ಅಪಮಾನ ಮಾಡಿದ್ದಾರೆ. ಶಿವಸೇನೆ ಕೂಡ ಇದರಲ್ಲಿ ಭಾಗಿಯಾಗಿದೆ. ಬೆಳಗಾವಿಯಲ್ಲಿ ಪದೇ ಪದೆ ಇಂಥ ಘಟನೆಗಳು ಮರುಕಳಿಸುತ್ತಲೇ ಇವೆ. ಕೂಡಲೇ ಸರ್ಕಾರ ಈ ಎರಡೂ ಸಂಘಟನೆಗಳನ್ನು ಮಟ್ಟ ಹಾಕಬೇಕು. ಅದರ ಪದಾಧಿಕಾರಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

    ಈ ವೇಳೆ 20ಕ್ಕೂ ಹೆಚ್ಚು ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿಗೆ ನುಗ್ಗಲು ಯತ್ನಿಸಿದರು. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
    ಮುಖಂಡರಾದ ಪ್ರಕಾಶ ಕುಂಬಾರ, ದಸ್ತಗೀರ ಸಾಲೋಟಗಿ, ಫಯಾಜ್ ಕಲಾದಗಿ, ವಿನೋದ ದಳವಾಯಿ, ಬಸವರಾಜ ಕಾತ್ರಾಳ, ಆಸೀಫ್ ಫೀರಜಾದೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts