More

    ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೊಳಿಸಿ

    ವಿಜಯಪುರ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜ ವತಿಯಿಂದ ಮಂಗಳವಾರ ಶಾಸಕ ಎಂ.ಬಿ. ಪಾಟೀಲರ ಮನೆ ಮುಂದೆ ಸಾಂಕೇತಿಕ ಧರಣಿ ನಡೆಸಲಾಯಿತು.

    ಬೆಳಗಾವಿ ವಿಭಾಗದ ಅಧ್ಯಕ್ಷ ಮಹೇಶ ಬಿ. ಅಗರಖೇಡ ಮಾತನಾಡಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯಾ ಆಧಾರದ ಮೇಲೆ ಒಳಮೀಸಲಾತಿ ನೀಡುವುದಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಈವರೆಗೆ ಕೇಂದ್ರ ಸರ್ಕಾರ ವರದಿ ಅನುಷ್ಠಾನಗೊಳಿಸಿಲ್ಲ. ಆದ್ದರಿಂದ ಸಿಎಂ ಬಸವರಾಜ ಬೊಮ್ಮಾಯಿ ಶೀಘ್ರದಲ್ಲಿ ಭಾರತ ಸಂವಿಧಾನದ ವಿಧಿ 341 (2) ಪ್ರಕಾರ ತಿದ್ದುಪಡಿ ಮಾಡಿ ನ್ಯಾಯಮೂರ್ತಿ ಎ.ಜೆ. ಸದಾಶಿವ ವರದಿಯನ್ನು ಶೀಘ್ರವಾಗಿ ಸಚಿವ ಸಂಪುಟದಲ್ಲಿ ಅನುಷ್ಠಾನಗೊಳಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸಲು ವಿರೋಧ ವ್ಯಕ್ತಪಡಿಸಿದ ಸಚಿವ ಪ್ರಭು ಚವಾಣ್ ಇವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದರು.

    ಕಲಬುರಗಿ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ನಾಟೀಕಾರ, ರವೀಂದ್ರ ನಾರಾಯಣಪುರ, ಪ್ರತಾಪ ಭರತ, ರಮೇಶ ಕಟ್ಟಿಮನಿ, ಶಿವಾಜಿ ಪಠಾಣ, ಧರ್ಮಣ್ಣ ಪೂಜಾರಿ, ಕುಮಾರ ಜಾಧವ, ಜ್ಞಾನೇಶ ಪೂಜಾರಿ, ಬಾಳಪ್ಪ ಹರಿಜನ, ನೀಲಪ್ಪ ತೊಂಡಿಕಟ್ಟಿ, ಅಶೋಕ ರತ್ನಾಕರ, ಶಿವಾನಂದ ರೂಗಿ, ರಾಜು ಮಾಂಗ, ಮಲ್ಲಪ್ಪ ಮಾಂಗ, ಸೋಮಶೇಖರ ಶಿಮಂತ, ರಾಕೇಶ ಗಾಯಕವಾಡ, ಸಿದರಾಮ ನಂದರಗಿ, ಉಮೇಶ ಮಾಂಗ, ಗಂಗಾಧರ ಮಾಂಗ, ಶ್ರೀಶೈಲ ಕಟ್ಟಿಮನಿ, ಸದಾಶಿವ ಮಾದರ, ಶಿವಾ ಕೋಳಿ, ಖಾಜಪ್ಪ ಮಾಂಗ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts