More

    ಮಾದರಿಯಾದ ವ್ಯಾಪಾರಸ್ಥರು..!

    ಶಶಿಕಾಂತ ಮೆಂಡೆಗಾರ, ವಿಜಯಪುರ

    ಗುಮ್ಮಟ ನಗರಿ ವಿಜಯಪುರದಲ್ಲಿ ಕರೊನಾ ಅತ್ಯಂತ ತೀವ್ರ ಗತಿಯಲ್ಲಿ ಹರಡುತ್ತಿರುವುದರಿಂದ ಜನರಲ್ಲಿ ಭಯ ಹುಟ್ಟಿಸಿದೆ. ಈ ಹಿನ್ನೆಲೆ ವಿಜಯಪುರದ ವ್ಯಾಪಾರಸ್ಥರು ಕರೊನಾ ತಡೆಗಟ್ಟಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು ಭೇಷ್ ಎನಿಸಿಕೊಂಡಿದ್ದಾರೆ.
    ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆ ಸಂಕೀರ್ಣದಲ್ಲಿನ ಸಾಲುಸಾಲು ಅಂಗಡಿಗಳು ಸ್ವಯಂ ಲಾಕ್ ಆಗಿವೆ. ಕರೊನಾ ತಡೆಗೆ ವ್ಯಾಪಾರಸ್ಥರು ಸ್ವಯಂ ಆಗಿ ಬಂದ್ ಮಾಡುವ ಮೂಲಕ ಮಾಡಿದ ಮಾಸ್ಟರ್ ಪ್ಲಾನ್ ಹೇಗಿದೆ.
    ನಗರದ ಗಾಂಧಿಚೌಕ್ ಬಳಿ ಇರುವ ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆ ಸಂಕೀರ್ಣದಲ್ಲಿ 450ಕ್ಕೂ ಹೆಚ್ಚು ಮಳಿಗೆಗಳಿವೆ. ಇದರಲ್ಲಿನ 150 ಅಂಗಡಿಗಳನ್ನು 10 ದಿನ ಮುಚ್ಚುವುದು. ಬಳಿಕ ಮತ್ತೆ ಅವರು ಅಂಗಡಿ ಆರಂಭಿಸಿ ಉಳಿದ 150 ಮಳಿಗೆಗಳನ್ನು ಬಂದ್ ಮಾಡುವುದು ಮಾಡುತ್ತಿದ್ದಾರೆ.
    ಹೀಗೆ ತಿಂಗಳಿಗೆ ಪ್ರತಿಯೊಬ್ಬರೂ 10 ದಿನಗಳು ಅಂಗಡಿಗಳನ್ನು ಕ್ಲೋಸ್ ಮಾಡುವುದರಿಂದ ಒಂದೇ ಸಂಕೀರ್ಣದಲ್ಲಿ ಎದುರುಗಡೆಯ ಸಾಲಿನ ಅಂಗಡಿಗಳಲ್ಲಿ ಜನದಟ್ಟಣೆ ಆಗುವುದನ್ನು ತಡೆಯಬಹುದಾಗಿದೆ. ಎಲ್ಲ ವ್ಯಾಪಾರಿಗಳಿಗೂ ಸಮನಾದ ಅವಕಾಶವೂ ಸಿಗಲಿದೆ. ಹೀಗೆ ಮಾಡುವುದರಿಂದ ಶೇಕಡಾ 50ರಷ್ಟು ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ. ಕಳೆದ ಒಂದು ತಿಂಗಳಿನಿಂದ ಈ ಪ್ಲಾನ್ ಅಳವಡಿಸಿಕೊಳ್ಳಲಾಗಿದ್ದು, ಎಲ್ಲರಿಗೂ ಅನುಕೂಲವಾಗಿದೆ.
    ಸಂಕೀರ್ಣದಲ್ಲಿ ದಿನಸಿ, ಬಟ್ಟೆ, ಸ್ಟೇಷನರಿ, ರೆಡಿಮೇಡ್ ವಸ್ತುಗಳು, ಸ್ವೀಟ್‌ಮಾರ್ಟ್‌ಗಳು, ಎಲೆಕ್ಟ್ರಾನಿಕ್ಸ್ ಅಂಗಡಿಗಳು, ಬುಕ್ ಸ್ಟಾಲ್ ಗಳು, ಪಾದರಕ್ಷೆ ಅಂಗಡಿಗಳು ಎಲ್ಲವೂ ಸಹ ಒಂದೇ ಕಡೆ ಸಿಗಲಿವೆ. ಹೀಗಾಗಿ ಜನರು ಹೆಚ್ಚಾಗಿ ಬರುವುದರಿಂದ ವ್ಯಾಪಾರಸ್ತರೆಲ್ಲ ಸೇರಿ ಸ್ವಯಂ ಆಗಿ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ. ಒಂದು ಸಾಲಿನಲ್ಲಿರುವ ಅಂಗಡಿಗಳು ಕ್ಲೋಸ್ ಮಾಡುವ ಮೂಲಕ ಎದುರುಗಡೆಯ ಸಾಲಿನ ಅಂಗಡಿಗಳಿಗೆ ವ್ಯಾಪಾರಕ್ಕಾಗಿ ಅನುಕೂಲ ಕಲ್ಪಿಸಲಾಗುತ್ತಿದೆ.

    ಕರೊನಾ ನಿಯಂತ್ರಣಕ್ಕೆ ವ್ಯಾಪಾರಸ್ಥರೆಲ್ಲರೂ ಸೇರಿ ಸರತಿಯಂತೆ ಅಂಗಡಿಗಳನ್ನು ಬಂದ್ ಮಾಡುವ ಹಾಗೂ ಆರಂಭಿಸುವ ಯೋಜನೆ ರೂಪಿಸಿದ್ದು, ಅದರಂತೆಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಇದರಿಂದ ಜನದಟ್ಟಣೆಯೂ ಕಡಿಮೆ ಆಗುವುದಲ್ಲದೇ, ಗ್ರಾಹಕರಿಗೂ, ವಹಿವಾಟಿಗೂ ಅನುಕೂಲವಾಗಿದೆ.
    ಉಲ್ಲಾಸ ಶಹಾ, ಪ್ರಭುಲಿಂಗ ಅಡಿಕಿ, ವ್ಯಾಪಾರಸ್ಥರು.

    ಸರ್ಕಾರ ಎಷ್ಟೇ ಪ್ರಯತ್ನಪಟ್ಟರೂ ಕರೊನಾ ಮಹಾಮಾರಿ ಹಬ್ಬುತ್ತಿದೆ. ಜನರ ಸಹಕಾರವೂ ಇದಕ್ಕೆ ಅತ್ಯಗತ್ಯ. ಮನೆಯಿಂದ ಹೊರಗೆ ಬಂದಾಗ ಜಾಗರೂಕತೆಯಿಂದ ವರ್ತಿಸುವುದು ಅವಶ್ಯ. ಮಾಸ್ಕ್‌ನ್ನು ಧರಿಸಿ, ಸ್ಯಾನಿಟೈಸರ್ ಬಳಸಿ ಯಾರನ್ನೂ ಮುಟ್ಟದೇ ಎಚ್ಚರಿಕೆಯಿಂದ ಇರಬೇಕು. ವ್ಯಾಪಾರಸ್ಥರೂ ಸರತಿಯಲ್ಲಿ ಅಂಗಡಿಗಳನ್ನು ತೆರೆಯುತ್ತಿರುವುದು ಎಲ್ಲರಿಗೂ ಅನುಕೂಲವೇ ಆಗಿದೆ. ಇದರಿಂದ ಲಾಕ್‌ಡೌನ್ ಮಾಡಿ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸುವುದೂ ತಪ್ಪುತ್ತದೆ.
    ಶ್ರೀಶೈಲ ಬಿರಾದಾರ, ಸಾರ್ವಜನಿಕ

    ಮಾದರಿಯಾದ ವ್ಯಾಪಾರಸ್ಥರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts