More

    ಎಲ್ಲ ಕ್ಷೇತ್ರದಲ್ಲೂ ಮಹಿಳೆ ಮುಂಚೂಣಿ

    ವಿಜಯಪುರ : ಕಿತ್ತೂರು ರಾಣಿ ಚನ್ನ್ನಮ್ಮ ಅವರ ಆದರ್ಶ ಜೀವನ, ಸಾಧನೆ ಮತ್ತು ಧೈರ್ಯ ಮೆಚ್ಚುವಂತಹದ್ದಾಗಿದೆ ಎಂದು ದೇವರ ನಿಂಬರಗಿಯ ಶ್ರೀಬಲಭೀಮ ಪಪೂ ಕಾಲೇಜಿನ ಉಪನ್ಯಾಸಕ ಪ್ರೊ. ಜಿ.ಡಿ.ಹಿರೇಮಠ ಹೇಳಿದರು.

    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಚನ್ನಮ್ಮ ಅವರ ಹೋರಾಟ ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಅಗ್ರಗಣ್ಯವಾದದ್ದು, ಅವರ ಅಚಲ ಆತ್ಮವಿಶ್ವಾಸದಿಂದ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಅವರನ್ನು ಆದರ್ಶವಾಗಿಟ್ಟುಕೊಂಡು ಇಂದು ಮಹಿಳೆಯರು ಸಾಧನೆ ಮಾಡಬೇಕಿದೆ. ಸಮಾಜದ ವೃತ್ತಿರಂಗದ ಎಲ್ಲ ಇಲಾಖೆಗಳಲ್ಲಿ ಮಹಿಳೆ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಸರ್ಕಾರ ಹಾಗೂ ಸಂವಿಧಾನ ಹೆಣ್ಣಿಗೆ ಪ್ರಾಧಾನ್ಯತೆ ನೀಡಿದರೂ, ರಕ್ಷಣೆ ಇಲ್ಲದಂತಾಗಿದೆ. ಚನ್ನಮ್ಮರಂಥ ಧೀರ ಮಹಿಳೆಯಂತೆ ಎಲ್ಲರೂ ಸಮಾಜದಲ್ಲಾಗುತ್ತಿರುವ ಶೋಷಣೆ, ದೌರ್ಜನ್ಯದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.

    ಜಮಖಂಡಿಯ ವಿದ್ಯಾಭವನ ಅಂತರಾಷ್ಟ್ರೀಯ ಶಾಲೆ ಪ್ರಾಚಾರ್ಯ ಅನಮ್ ಮುಲ್ಲಾ, ಗೆಲಾಕ್ಸಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಜಿ.ಡಿ. ಕೊಟ್ನಾಳ, ಕಸಾಪ ಜಿಲ್ಲಾ ಕಾರ್ಯದರ್ಶಿ ಎಸ್. ಎಸ್. ಖಾದ್ರಿ ಇನಾಮದಾರ, ಬಸವರಾಜ ಕುಂಬಾರ, ದಾಕ್ಷಾಯಿಣಿ ಬಿರಾದಾರ, ಭಾರತಿ ಟಂಕಸಾಲಿ, ರವಿ ಕಿತ್ತೂರ, ಮನು ಪತ್ತಾರ, ರಾಜಶೇಖರ ಉಮರಾಣಿ, ಡಾ.ರಾಜಕುಮಾರ್ ಜೊಲ್ಲೆ, ಮಹಾದೇವಿ ತೆಲಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts