More

    ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯವಾಗಲಿ

    ವಿಜಯಪುರ: ಖಾಸಗಿ ಹಾಗೂ ಸರ್ಕಾರಿ ಕಚೇರಿ, ಬ್ಯಾಂಕ್, ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಕರವೇ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿಶಿಷ್ಟ ರೀತಿಯಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ ಹಮ್ಮಿಕೊಂಡಿದೆ. ಕೆಲ ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಮೇಲೆ ಕನ್ನಡ ನಾಮಫಲಕ ಅಳವಡಿಸಿಲ್ಲ. ಜಾಗತೀಕರಣದ ಪ್ರಭಾವದಿಂದ ನೆಲದ ಭಾಷೆ ಹಿಂದೆ ಸರಿದು ಅನ್ಯ ಭಾಷೆ ಮುನ್ನೆಲೆಗೆ ಬಂದಿದೆ. ಹೀಗಾಗಿ ಎಲ್ಲರಿಗೂ ಕನ್ನಡ ಭಾಷೆ ಮಹತ್ವ ತಿಳುಸುವುದೇ ನಮ್ಮ ಗುರಿ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ವ್ಯವಹರಿಸುವುದು ಪ್ರತಿಯೊಬ್ಬ ಅಧಿಕಾರಿ ಕರ್ತವ್ಯವಾಗಬೇಕಿದೆ ಎಂದರು.

    ಜಿಲ್ಲಾ ಗೌರವಾಧ್ಯಕ್ಷ ಎಂ.ಎಂ. ಖಲಾಸಿ ಮಾತನಾಡಿ, ಇಂಗ್ಲಿಷ್‌ನಲ್ಲಿರುವ ನಾಮಲಕಗಳನ್ನು ತೆರವುಗೊಳಿಸಿ ಕನ್ನಡದಲ್ಲಿ ಬರೆಸಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ ಮಾತನಾಡಿ, ಸಂಘ ಸಂಸ್ಥೆಗಳು ಸರ್ಕಾರಿ ಹಾಗೂ ಅರೆಸರ್ಕಾರಿ ಮಳಿಗೆಗಳ ಮೇಲೆ ಕನ್ನಡದ ನಾಮಲಕ ಕಡ್ಡಾಯವಾಗಿ ಬಳಸಬೇಕು. ಗ್ರಾಹಕರ ಜತೆಗೆ ಬ್ಯಾಂಕ್ ವ್ಯವಸ್ಥಾಪಕರು ಸಹಕರಿಸಬೇಕೆಂದರು.

    ಮಾಲತಿ ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದ ಮುಗ್ಧ ಜನರು ಬ್ಯಾಂಕ್‌ಗಳಲ್ಲಿ ಅವರಿವರ ಮೊರೆ ಹೋಗಿ ಅರ್ಜಿಯನ್ನು ತುಂಬಲು ವಿನಂತಿಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸಬೇಕಿದೆ ಎಂದರು.

    ಮಹಾಂತೇಶ ಸಾಸಾಬಾಳ, ಬಾಬು ಲಮಾಣಿ, ಉದಯ ಕುಲಕರ್ಣಿ, ಸಿದ್ದಪ್ಪ ಹರಿಜನ, ಶಂಕರ ಬಿರಾದಾರ, ಸುಮಿತ್ರಾ ಗೊಣಸಗಿ, ಯಲ್ಲಮ್ಮ ಮುಳವಾಡ, ಜಿ.ಬಿ.ಮಜ್ಜಗಿ, ಐ.ವೈ.ಮುಲ್ಲಾ, ರಾಜು ಪವಾರ, ಸಿದ್ದು ವ್ಯಾಪಾರಿ, ವಸಂತ ಕುಲಕರ್ಣಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts