More

    ಮಾತೃಭಾಷೆ ತಾಯಿಗೆ ಸಮಾನ

    ವಿಜಯಪುರ: ಮಾತೃಭಾಷೆ ಅಂದರೆ ತಾಯಿಗೆ ಸಮಾನವಾದುದು. ನಾವು ಹುಟ್ಟಿದ ಭೂಮಿಯನ್ನು ಮಾತೃಭೂಮಿ, ಆಡುವ ಭಾಷೆಯನ್ನು ಮಾತೃಭಾಷೆ ಎಂದು ಹೇಳುತ್ತೇವೆ. ಆದ್ದರಿಂದ ತಾಯಿಯಷ್ಟೇ ಭಾಷೆಗೆ ಮಹತ್ವ ನೀಡಬೇಕಾಗಿದೆ ಎಂದು ಬಸವನ ಬಾಗೇವಾಡಿಯ ಬಿಎಲ್‌ಡಿಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಸ್.ಟಿ. ಮೇರವಾಡೆ ಹೇಳಿದರು.
    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಬುಧವಾರ ನಡೆದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನೆಲೆ ಇದೆ. ಮೂಲ ಭಾಷೆಯ ಜತೆಗೆ ಇನ್ನುಳಿದ ಭಾಷೆಗಳನ್ನು ಗೌರವಿಸೋಣ. ಭಾಷೆಗೆ ಗಡಿ ಹಾಕಿಕೊಳ್ಳದೆ ಎಲ್ಲ ಭಾಷೆಗಳನ್ನು ಗೌರವಿಸುವ ಕೆಲಸ ಮಾಡಬೇಕು ಎಂದರು.
    ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಸಂಸ್ಕೃತ ಮತ್ತು ಗ್ರೀಕ್ ಭಾಷೆಯ ನಂತರ ವಿಶ್ವದಲ್ಲಿಯೇ ಕನ್ನಡ ಮೂರನೇ ಪುರಾತನ ಭಾಷೆ ಆಗಿದೆ. ಮೂರು ಸಾವಿರ ಹಿಂದಿನ ಇತಿಹಾಸ ಹೊಂದಿರುವ ಉತ್ಕೃಷ್ಠ ಭಾಷೆ ನಮ್ಮದು. ಇಂಗ್ಲಿಷ್ ಭಾಷೆಗೆ ಸ್ವಂತ ಲಿಪಿಯಿಲ್ಲ. ಅದು ರೋಮನ್ ಭಾಷೆಯಿಂದ ಎರವಲು ಪಡೆದಿರುವುದು. ಅದೇ ರೀತಿ ಹಿಂದಿ ಕೂಡ ದೇವನಗರಿ ಲಿಪಿ, ಕನ್ನಡ ಸ್ವಂತ ಲಿಪಿಯುಳ್ಳ ಭಾಷೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಾಹಿತಿ ಜಿ.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವಿದ್ಯಾವತಿ ಅಂಕಲಗಿ ಮಾತನಾಡಿದರು. ಪ್ರಾಚಾರ್ಯ ಎಸ್. ಎನ್.ನಾರಾಯಣಕಾರ, ಕಸಾಪ ಜಿಲ್ಲಾ ಕಾರ್ಯದರ್ಶಿ ಬಸವರಾಜ ಕುಂಬಾರ, ದಾಕ್ಷಾಯಿಣಿ ಬಿರಾದಾರ, ರಾಜೇಂದ್ರಕುಮಾರ ಬಿರಾದಾರ, ಭರತೇಶ ಕಲಗೊಂಡ, ಡಾ.ಎಸ್.ಎಸ್. ಅನಂತಪುರ, ಡಾ.ಜಿ.ಡಿ. ಕೊಟ್ನಾಳ, ಶರಣಗೌಡ ಪಾಟೀಲ, ಡಾ. ರಾಜಕುಮಾರ ಜೊಲ್ಲೆ, ಮಹಾದೇವಿ ತೆಲಗಿ, ಕಮಲಾ ಗೆಜ್ಜೆ , ಸುನಂದಾ ಕೋರಿ, ಬಂಡೆಪ್ಪ ತೇಲಿ, ಮನು ಪತ್ತಾರ, ಮಯೂರ ತಿಳಗುಳಕರ, ಸದಾಶಿವ ಪೂಜಾರಿ, ಮಂಜುನಾಥ ಶಾಪೇಟಿ, ರವಿ ಕಿತ್ತೂರು, ಶರಣು ಸಬರದ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts