More

    ಕನ್ನಡ ಸಾಹಿತ್ಯ ಓದಿ, ಕನ್ನಡ ಭಾಷೆ ಬೆಳಸಿ

    ವಿಜಯಪುರ: ಕನ್ನಡ ಸಾಹಿತ್ಯ ಓದಿ, ಕನ್ನಡ ಭಾಷೆ ಬೆಳೆಸುವುದು ಇಂದಿನ ಯುವಕರ ಜವಾಬ್ದಾರಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
    ನಗರದ ಬಿಎಲ್‌ಡಿಇ ಸಂಸ್ಥೆಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
    ಕನ್ನಡ ಸಾಹಿತ್ಯದ ನಿರಂತರ ಅಧ್ಯಾಯನದಿಂದ ವ್ಯಕ್ತಿಯು ಸಾಹಿತಿ, ಲೇಖಕ, ವಿಮರ್ಶಕನಾಗಬಹುದು ಎಂದು ಹೇಳಿದರು.
    ಉಜ್ವಲಾ ಸರನಾಡಗೌಡ ಕಾರ್ಯಕ್ರಮ ಉದ್ಘಾಟಿಸಿ, ಕಲಿಕೆ ನಿರಂತರವಾಗಿರಬೇಕು. ಶರಣರ ಜೀವನ ದೇವರಿಗೆ ಶರಣಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಆಧ್ಯಾತ್ಮಿಕತೆಯತ್ತ ಸಾಗುವುದಾಗಿತ್ತು ಎಂದರು.
    ಡಾ. ಕಾಂತು ಇಂಡಿ ಮಾತನಾಡಿ, 12ನೇ ಶತಮಾನದಲ್ಲಿ ಆದಂಥ ಶರಣರ ಚಳವಳಿ, ಮಹಿಳೆಯರ ಶಿಕ್ಷಣ, ಜಾತಿ ಸಮಾನತೆಗೆ ಹೋರಾಟ, ಕಾಯಕ ದಾಸೋಹ ಎಂಬ ವಿಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿದೀಪವಾಗಿವೆ ಎಂದರು.
    ನ್ಯಾಯವಾದಿ, ಸಾಹಿತಿ ವಿದ್ಯಾವತಿ ಅಂಕಲಗಿ ಮಾತನಾಡಿ, ಸಂವಿಧಾನದಲ್ಲಿರುವ ಇಂದಿನ ಕಾನೂನುಗಳೆಲ್ಲವು ಶರಣರ ಕಾಲದಲ್ಲಿ ಬಂದು ಹೋಗಿದೆ. ಶರಣರ ಅನುಭವ ಮಂಟಪದಲ್ಲಿ 33 ಶರಣೆಯರಿದ್ದರು. ಆದರೆ, ಇಂದಿನವರಿಗೆ ನಾವು ಶೇ.33 ಮಹಿಳೆಯರಿಗೆ ಆದ್ಯತೆ ಪಡೆಯಲು ಸಾಧ್ಯವಾಗಿಲ್ಲ ಎಂದರು.
    ಅಪ್ಪಾಸಾಹೇಬ ಯರನಾಳ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ. ಅಂಗಡಿ, ಡಾ. ಬಿ. ವೈ. ಖಾಸನೀಸ್, ಡಾ. ಎ.ವಿ. ಬಮಗೊಂಡ, ಡಾ. ಎಂ.ಬಿ. ಕೋರಿ, ಡಾ. ಜೆ.ಎಸ್. ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಪ್ರೊ. ಎಸ್. ಬಿ. ಕಂಬಾರ, ಪ್ರೊ. ಪಿ.ಡಿ. ಮುಲ್ತಾನಿ ಉಪಸ್ಥಿತರಿದ್ದರು. ಚಂದ್ರಕಲಾ ದೊಡ್ಮನಿ ನಿರೂಪಿಸಿದರು, ಶ್ರೀಪಾದ ಕುಲಕರ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts