More

    ಜ್ಞಾನ ಯೋಗಾಶ್ರಮದಲ್ಲಿ ಯೋಗ ಶಿಬಿರ

    ವಿಜಯಪುರ: ನಗರದ ಜ್ಞಾನಯೋಗಾಶ್ರಮದಲ್ಲಿ ರಥ ಸಪ್ತಮಿ ನಿಮಿತ್ತ ಯೋಗ ಪರಿವಾರದಿಂದ ಮಂಗಳವಾರ ಬೆಳಗ್ಗೆ ಯೋಗ ಶಿಬಿರ ಆರಂಭಿಸಲಾಯಿತು.
    ಶಿಬಿರ ನೆರವೇರಿಸಿದ ಕಾತ್ರಾಳ-ಬಾಲಗಾಂವನ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಮಾತನಾಡಿ, ಯೋಗದಿಂದ ರೋಗ ದೂರ. ಆರೋಗ್ಯವಂತ ಜೀವನ ಸಾಗಿಸಲು ಇದು ಸಹಕಾರಿ. ವೇದಗಳಲ್ಲೂ ಉಲ್ಲೇಖವಿದೆ. ಆದಿ ಶಂಕರಾಚಾರ್ಯ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಅಲ್ಲದೆ 2500 ವರ್ಷಗಳ ಇತಿಹಾಸವಿದೆ ಎಂದರು.
    ವಿಶ್ವ ಹಿಂದು ಪರಿಷತ್ ಪ್ರಮುಖ ಸುನಿಲ ಭೈರವಾಡಗಿ ಮಾತನಾಡಿ, ಕಳೆದ ವರ್ಷ ೆಬ್ರವರಿಯಲ್ಲಿ ರಥ ಸಪ್ತಮಿ ದಿನದಂದು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ಸೂರ್ಯದೇವನ ಆರಾಧನೆ ಮಾಡಲಾಯಿತು. ಈ ವರ್ಷ ಸಹ ೆ. 1 ರಂದು ಇದೇ ಆಶ್ರಮದ ಪ್ರಾಂಗಣದಲ್ಲಿ ಯೋಗ ಹಮ್ಮಿಕೊಳ್ಳಲಾಗಿದೆ ಎಂದರು.
    ಕಲಬುರ್ಗಿ ವಿವಿಯ ಯೋಗ ಉಪನ್ಯಾಕ ಚಂದ್ರಕಾಂತ ಬಿರಾದಾರ ಯೋಗದ ಮಹತ್ವ ತಿಳಿಸಿದರು. ಮಂಜುಳಾ ಹಿಪ್ಪರಗಿ ಪ್ರಾರ್ಥಿಸಿದರು. ಯೋಗ ಶಿಕ್ಷಕ ಮಡಿವಾಳ ದೊಡ್ಡಮನಿ ನಿರೂಪಿಸಿದರು. ಭಾರತೀಯ ಯೋಗ ಸಂಸ್ಥಾನದ ಆನಂದ ಭೂತಡಾ, ಸುರೇಶ ಬಾಗೇವಾಡಿ, ದತ್ತಾತ್ರೆಯ ಹಿಪ್ಪರಗಿ, ಸಾವಿತ್ರಿ ಹಿರೇಮಠ, ಸುನೀತಾ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts