More

    ಮಹಿಳೆಯರನ್ನು ಗೌರವದಿಂದ ಕಾಣಿ

    ವಿಜಯಪುರ: ಮಹಿಳೆಯರು, ಮಕ್ಕಳು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಅನೌಪಚಾರಿಕ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಟಿಯೋಲ್ ಮಚಾದೊ ಹೇಳಿದರು.
    ನಗರದ ಜಾಡರಗಲ್ಲಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಬಾಲಕಿರಣ ಘಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ತರಬೇತಿ ಶಿಬಿರ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಮಹಿಳೆಯರು-ಮಕ್ಕಳನ್ನು ಯಾರೂ ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ನಾವು ಬದುಕಬೇಕು. ಮತ್ತೊಬ್ಬರನ್ನು ಗೌರವಯುತವಾಗಿ ಬದುಕಲು ಬಿಡಬೇಕು. ಇತರರ ಹಕ್ಕುಗಳನ್ನು ಕಸಿದುಕೊಂಡು ಬದುಕುವುದು ಮಾನವನ ಲಕ್ಷಣವಲ್ಲ. ಪ್ರತಿಯೊಬ್ಬರೂ ಪರಸ್ಪರ ಶಾಂತಿ, ಪ್ರೀತಿ, ಸೌಹಾರ್ದತೆ, ಗೌರವದ ಬದುಕು ಸಾಗಿಸಬೇಕೆಂದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ ಮಾತನಾಡಿ, ಮಾನವ ತನ್ನ ಜೀವಮಾನವಿಡಿ ಮತ್ತೊಬ್ಬರ ತಪ್ಪ್ಪುಗಳನ್ನು ಕಂಡು ಹಿಡಿಯುವುದರಲ್ಲಿ ಕಾಲಹರಣ ಮಾಡದೆ ಪ್ರತಿಯೊಬ್ಬರಲ್ಲೂ ಇರುವ ಒಳ್ಳೆಯ ಗುಣಗಳನ್ನು ಕಂಡುಕೊಳ್ಳಬೇಕಿದೆ. ಆ ಮೂಲಕ ಸಕಾರಾತ್ಮಕ ಚಿಂತನೆಗಳೊಂದಿಗೆ ಒಳ್ಳೆಯ ಗುರಿ ಮತ್ತು ಭರವಸೆಯೊಂದಿಗೆ ಜೀವನ ಸಾಗಿಸಬೇಕು ಎಂದರು. ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಮೀನಾಕ್ಷಿ ಸಿಂಗೆ, ಅರ್ಪಿತಾ ಗೊಳಸಂಗಿ, ಅಂಕಿತಾ ಗೊಳಸಂಗಿ, ಸಾವಿತ್ರಿ ಹಿರೇಮಠ, ಕಾವ್ಯ ತಳವಾರ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts