More

    ಹಡಗಲಿ ಗ್ರಾಮದ ಗೋಮಾಳ ರಕ್ಷಣೆಗೆ ಆಗ್ರಹ

    ವಿಜಯಪುರ: ತಾಲೂಕಿನ ಹಡಗಲಿ ಗ್ರಾಮದ ಕಾಯ್ದಿರಿಸಿದ ಸರ್ಕಾರಿ ಜಮೀನನ್ನು ಜಾನುವಾರು ಮೇಯಿಸಲು ಕಾಯ್ದಿರಿಸಬೇಕೆಂದು ಗ್ರಾಮಸ್ಥರು ಹಾಗೂ ಗೋಮಾಳ ರಕ್ಷಣಾ ಸಮಿತಿ ಆಂದೋಲನ ಕಾರ್ಯಕರ್ತರು ಬುಧವಾರ ವಿಜಯಪುರದ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಜಿ.ಪಂ. ಅಧ್ಯಕ್ಷೆ ಸುಜಾತ ಕಳ್ಳಿಮನಿ ಮಾತನಾಡಿ, ಜಿಲ್ಲೆಯಲ್ಲಿ ಗೋಮಾಳ, ವಡಾವು, ಪಡ ಮುಂತಾದ ಹಲವು ಹೆಸರುಗಳಿಂದ ಹುಲ್ಲುಗಾವಲಿಗಾಗಿ ಮೀಸಲಿಟ್ಟ ಜಮೀನುಗಳು ಪಶು ಸಂಗೋಪನೆ ಮಾಡುವವರ ಹಿತದೃಷ್ಟಿಯಿಂದ ಮೇಯಿಸಲು ಕಾಯ್ದಿರಿಸಬೇಕು. ಅದನ್ನು ಬಿಟ್ಟು ಕೈಗಾರಿಕೆ ಹಾಗೂ ಇನ್ನಿತರರಿಗೆ ಹಸ್ತಾಂತರಿಸಬಾರದು. ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಸರ್ವೇ ನಂ. 42/2 ಕ್ಷೇತ್ರ 291 ಎಕರೆ 36 ಗುಂಟೆ ಈ ಜಮೀನವು ವಿದ್ಯುತ್ ನಿಗಮದವರಿಗೆ ಹಸ್ತಾಂತರ ಮಾಡದೆ ನಿಗಮದವರಿಗೆ ಪ್ರತ್ಯೇಕ ಜಮೀನನ್ನು ಖರೀದಿ ಮಾಡಿ ನೀಡಬೇಕೆಂದು ಹೇಳಿದರು.

    ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಬ್ರಿಟಿಷರ ಕಾಲದಿಂದಲೂ ಇಲ್ಲಿಯ ತನಕ ಹಲವು ಹುಲ್ಲುಗಾವಲುಗಳನ್ನು ಗೋ ಸಂಪತ್ತನ್ನು ಹೆಚ್ಚಿಸಲು ಇಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಬೇಕಿದ್ದ ಜಮೀನಗಳನ್ನು ಸರ್ಕಾರ ತಮ್ಮ ಹಣದಿಂದ ಖರೀದಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ. ಆದರೆ ಜಾನುವಾರುಗಳಿಗೆ ಮೀಸಲಿಟ್ಟ ಗೋಮಾಳವನ್ನು ಅನ್ಯ ಇಲಾಖೆಗೆ ಹಸ್ತಾಂತರಿಸಬಾರದು. ಹಾಗೇನಾದರೂ ಆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮನಗೂಳಿಯ ಪರಮಾನಂದ ಸ್ವಾಮೀಜಿ, ಶಿವಣಗಿಯ ಸಿದ್ಧಮಹಾರಾಜ ಶ್ರೀಗಳು, ಐನಾಪುರದ ಮಾಳಿಂಗರಾಯ ಶ್ರೀಗಳು, ಹಡಗಲಿಯ ಲಕ್ಷ್ಮಣ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗೋಮಾಳ ಬಚಾವೋ ಆಂದೋಲನದ ಪ್ರಮುಖರಾದ ದೇವಕಾಂತ ಬಿಜ್ಜರಗಿ, ಮಲ್ಲಪ್ಪ ಬಿದರಿ, ಬೀರಪ್ಪ ಜುಮನಾಳ, ರಾಜೇಶ್ವರಿ ಯರನಾಳ, ರಾಜಶೇಖರ ಕುರಿ, ಕರೆಪ್ಪ ಬಸ್ತುಳ, ಬೀರಪ್ಪ ಜುಮನಾಳ, ಮೋಹನ ಮೇಟಿ, ಯಲ್ಲಾಲಿಂಗ ಯಂಬತ್ನಾಳ, ಸಂತೋಷ ಹತ್ತರಕಿ, ಮನು ಭಾವಿಕಟ್ಟಿ, ರಾಜು ಕಗ್ಗೋಡ, ಅರವಿಂದ ಡೋಣೂರ, ರಾಜು ಯರನಾಳ, ಸಂಜು ಪಾಂಡ್ರೆ, ಅಶೋಕ ಬಿಜ್ಜರಗಿ, ಬಂಗಾರು ಪೂಜಾರಿ, ಸಿದ್ದಪ್ಪ ಹಿರೇಕುರುಬರ, ಬೀರಪ್ಪ ಹಾದಿಮನಿ, ಮಾಳಪ್ಪ ಲಾಯಪ್ಪಗೋಳ, ಬೀರಪ್ಪ ಲಾಯಪ್ಪಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts