More

    ಮನೆಗಳಿಗೆ ನುಗ್ಗಿದ ಮಳೆ ನೀರು

    ವಿಜಯಪುರ: ಜಿಲ್ಲೆ ವಿವಿಧೆಡೆ ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
    ನಗರದ ಕಿರಾಣಾ ಬಜಾರ್‌ನಲ್ಲಿ ಮನೆಯೊಂದಕ್ಕೆ ನೀರು ನುಗ್ಗಿ ಧವಸ-ಧಾನ್ಯಗಳು ಹಾಳಾಗಿವೆ. ಪಾತ್ರೆ-ಪಗಡೆ ನೀರಲ್ಲಿ ತೇಲಿಕೊಂಡು ಹೋಗಿವೆ. ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮಳೆ ನೀರಿನ ರಭಸಕ್ಕೆ ಚರಂಡಿ ಒಡೆದಿದ್ದು, ಕಲುಷಿತ ನೀರು ಮನೆಗೆ ನುಗ್ಗಿದೆ ಎಂದು ಸ್ಥಳೀಯರು ದೂರಿದರು.
    ಚರಂಡಿ ನೀರು ಮನೆಗಳಿಗೆ ನುಗ್ಗಿದ ಕಾರಣ ಸಾಂಕ್ರಾಮಿಕ ರೋಗದ ಭಯ ಕಾಡುತ್ತಿದೆ. ಕೂಡಲೇ ಚರಂಡಿ ದುರಸ್ತಿ ಪಡಿಸಬೇಕೆಂದು ಸ್ಥಳೀಯರು ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಹಳ್ಳ ಭರ್ತಿಯಾಗಿ ಹೆಚ್ಚುವರಿ ನೀರು ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ರಾತ್ರಿ ಜೆಸಿಬಿ ಸಹಾಯದಿಂದ ನೀರಿನ ದಿಕ್ಕು ಬದಲಿಸಲು ಒಡ್ಡು ನಿರ್ಮಾಣ ಮಾಡಲಾಯಿತು. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸಿದರು.

    ಮಳೆ ವಿವರ

    ವಿಜಯಪುರ ತಾಲೂಕು-16.75 ಮಿಮೀ, ಬಬಲೇಶ್ವರ-2.8 ಮಿಮೀ, ತಿಕೋಟಾ-18.15 ಮಿಮೀ, ಬಸವನಬಾಗೇವಾಡಿ-20.07 ಮಿಮೀ, ನಿಡಗುಂದಿ-10.01 ಮಿಮೀ, ಮುದ್ದೇಬಿಹಾಳ-10.09 ಮಿಮೀ, ತಾಳಿಕೋಟೆ-1.03, ಇಂಡಿ-6.88 ಮಿಮೀ, ಚಡಚಣ-1.1 ಮಿಮೀ, ಸಿಂದಗಿ-00, ದೇವರಹಿಪ್ಪರಗಿ-6.33 ಮಿಮೀ ಮಳೆಯಾಗಿದೆ.

    ಮನೆಗಳಿಗೆ ನುಗ್ಗಿದ ಮಳೆ ನೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts