More

    ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳಿಗೆ ಕಷಾಯ

    ವಿಜಯಪುರ: ಕರೊನಾ ಹಾವಳಿ ನಡುವೆಯೂ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಂಠಿ ಕಷಾಯ ವಿತರಿಸುವ ಮೂಲಕ ವ್ಯಕ್ತಿಯೋರ್ವರು ವಿಶಿಷ್ಟವಾಗಿ ಜನ್ಮದಿನ ಆಚರಿಸಿಕೊಂಡರು.
    ಸಮಾಜ ಸೇವಕ ಶ್ರೀಧರ ಮಲ್ಲಿಕಾರ್ಜುನ ಬಿಜ್ಜರಗಿ ಶನಿವಾರ ಇಂಥದ್ದೊಂದು ವಿನೂತನ ಮಾದರಿ ಅನುಸರಿಸಿ ಗಮನ ಸೆಳೆದಿದ್ದಾರೆ. ನಗರದ ಗಾಂಧಿಚೌಕ್ ಬಳಿಯ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಹತ್ತಿರ ಎಲ್ಲ ಪರೀಕ್ಷಾರ್ಥಿಗಳಿಗೆ ಶುಂಠಿ ಕಷಾಯ ವಿತರಿಸಿದರು.
    ಈ ವೇಳೆ ಮಾತನಾಡಿದ ಶ್ರೀಧರ, ಶುಂಠಿ ಕಷಾಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಕರೊನಾ ನಿಯಂತ್ರಣಕ್ಕೆ ಸಹಕಾರಿ. ಎಲ್ಲಕ್ಕಿಂತ ಹೆಚ್ಚಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆತಂಕದ ಮಧ್ಯೆ ಪರೀಕ್ಷೆ ಎದುರಿಸುತ್ತಿರುವ ಕಾರಣ ಅವರ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಶುಂಠಿ ಕಷಾಯ ವಿತರಿಸಲಾಗುತ್ತಿದೆ ಎಂದರು.
    ರಾಹುಲ್, ರೋಹಿತ ಚಿಂಚಲಿ, ರುದ್ರು, ಸಚಿನ್ ಬಿಜ್ಜರಗಿ, ರವಿ ನಾಟಿಕರ್ ಮತ್ತಿತರರಿದ್ದರು.

    ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳಿಗೆ ಕಷಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts