More

    ಹಿರಿಯರಲ್ಲಿ ಸಾಮಾಜಿಕ ಜವಾಬ್ದಾರಿ ಇರಲಿ

    ವಿಜಯಪುರ: ವೃತ್ತಿಯಿಂದ ನಿವೃತ್ತಿಯಾದ ಹಿರಿಯರ ಮೇಲೆ ಗುರುತರವಾದ ಜವಾಬ್ದಾರಿಗಳಿವೆ ಎಂದು ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಹೇಳಿದರು.

    ಇಲ್ಲಿನ ರಾಧಾಕೃಷ್ಣನ್ ನಗರದ ಶಿವಬಸವ ಯೋಗಾಶ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 199ನೇ ಶಿವಾನುಭವಗೋಷ್ಠಿ ಹಾಗೂ ‘ಚಿಗುರು ಹೆಜ್ಜೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಈಗಿನ ಹಿರಿಯರಿಗೆ ಅನೇಕ ಸಾಮಾಜಿಕ ಜವಾಬ್ದಾರಿಗಳಿವೆ. ತಮ್ಮ ಬಡಾವಣೆಗಳಲ್ಲಿ ಯಾವ ಯಾವ ಕೊರತೆಗಳಿವೆ ಎಂಬುದನ್ನು ಪಟ್ಟಿ ಮಾಡಿಕೊಂಡು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತರಬೇಕು. ನಂತರದಲ್ಲಿ ತಾವೇ ಅದನ್ನು ಮುತುವರ್ಜಿ ವಹಿಸಿ ಬೆನ್ನುಹತ್ತಿ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ತಡವಾದಲ್ಲಿ ಮತ್ತೊಮ್ಮೆ ವಿಚಾರಿಸುವ, ಎಚ್ಚರಿಸುವ ಹಕ್ಕು ಮತ್ತು ಕರ್ತವ್ಯ ನಿಮ್ಮದಾಗಿದೆ ಎಂದರು.

    ಹಿಂದಿ ಉಪನ್ಯಾಸಕ ರಾಜೇಂದ್ರಕುಮಾರ್ ಬಿರಾದಾರ ಮಾತನಾಡಿ, ಇವತ್ತಿನ ಪೀಳಿಗೆಯಲ್ಲಿ ಬಹುತೇಕ ಮಂದಿಗೆ ಕವಿ, ಲೇಖಕ, ಬರಹಗಾರ ಎಂದೆನಿಸಿಕೊಳ್ಳಬೇಕೆಂಬ ಹಪಹಪಿ ಹೆಚ್ಚು ಕಾಣುತ್ತಿದೆ. ನಾವು ಬರೆಯುವ ಸಾಹಿತ್ಯದಲ್ಲಿ ಸತ್ವ ಇದ್ದಾಗ ಮಾತ್ರ ಸಾರಸ್ವತಲೋಕ ಅದನ್ನು ಒಪ್ಪ್ಪುತ್ತದೆ ಹಾಗೂ ಅಪ್ಪ್ಪುತ್ತದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಿ.ಎಲ್. ಬನಸೋಡೆ ಮಾತನಾಡಿ, ಸತ್ಸಂಗವೆಂದರೆ ಅದೊಂದು ಸಜ್ಜನರ ಸಂಘ. ಇಲ್ಲಿ ಚಿಂತನ-ಮಂಥನದ ನೆಪದಲ್ಲಿ ಮನಸ್ಸು ಶುದ್ಧವಾಗಬೇಕು. ಸತ್ಯ ಅಸತ್ಯಗಳ ಪರಿಚಯವಾಗಬೇಕು. ಮುಖ್ಯವಾಗಿ ನಮ್ಮನ್ನು ನಾವು ಅರಿಯಬೇಕು. ಊರಿಗೆ ಉಪಕಾರಿಯಾಗದಿದ್ದರೂ ಯಾರಿಗೂ ಅಪಕಾರ ಮಾಡದೆ, ಮನೆಗೂ ಮಾರಿಯಾಗದೆ ಬದುಕಿದರೆ ಅದುವೇ ಸಾರ್ಥಕ ಜೀವನ ಎಂದು ನುಡಿದರು.

    ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಸಂಗಮೇಶ ಬದಾಮಿ ಅವರನ್ನು ಗೌರವಿಸಲಾಯಿತು. ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಿ.ಆರ್. ಕುಲಕರ್ಣಿ, ಯು.ಎನ್. ಕುಂಟೋಜಿ, ಪ್ರೊ. ಶರಣಗೌಡ ಪಾಟೀಲ, ಮುರುಗೇಶ ಸಂಗಮ, ರಾಹುಲ ಮರಳಿ, ಮಹಾದೇವಿ ತೆಲಗಿ, ಪ್ರೀತಿ ಪಾಟೀಲ, ಜ್ಯೋತಿ ಗೆಜ್ಜಿ, ಕಮಲಾಕ್ಷಿ ಗೆಜ್ಜಿ, ಕಲ್ಯಾಣರಾವ ದೇಶಪಾಂಡೆ, ಜಿ.ಎಸ್. ಕುಲಕರ್ಣಿ, ವಿಜುಗೌಡ ಕಾಳಶೆಟ್ಟಿ, ಬಾಬಾಚಾರ್ಯ ಪುರಾಣಿಕ, ಶ್ರೀರಂಗ ಪುರಾಣಿಕ, ಪಿ.ಜಿ. ಜೋಶಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts