More

    ಸ್ವ ಉದ್ಯೋಗದತ್ತ ಯುವಕರು ಗಮನ ಹರಿಸಲಿ

    ವಿಜಯಪುರ: ದೇಶದ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳ ಯಶಸ್ಸಿನಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೀದ್ ಜಮಾದಾರ್ ಹೇಳಿದರು.
    ನಗರದ ಡಾ. ನಾಗೂರ ಕಾಲೇಜು ಸಭಾಭವನದಲ್ಲಿ ನೆಹರು ಯುವ ಕೇಂದ್ರ ಹಾಗೂ ಸ್ವಾಮಿ ವಿವೇಕಾನಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜಯಪುರ ವಿಭಾಗ ಮಟ್ಟದ ನೆರೆಹೊರೆ ಯುವ ಸಂಪತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಯುವ ಜನರಲ್ಲಿ ರಾಷ್ಟ್ರೀಯತೆ, ಸಾಮಾಜಿಕ ಬದ್ಧತೆ ಕೊರತೆಯಿದ್ದು, ಅವರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಯುವ ಸಂಸತ್ ವಿಚಾರ ವಿನಿಮಯ ಕಾರ್ಯಕ್ರಮ ಜಾರಿಗೆಗೊಳಿಸಿದೆ ಎಂದು ಹೇಳಿದರು.
    ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಆರ್.ಡಿ. ಜೈನಾಪುರ ಮಾತನಾಡಿ, ಯುವಕರಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸ್ವ ಉದ್ಯೋಗದತ್ತ ಗಮನ ಹರಿಸಬೇಕು. ಯುವ ಜನತೆ ಸಮಯ ಪಾಲನೆ ಹಾಗೂ ಉತ್ತಮ ಚಾರಿತ್ರೃ ಹೊಂದಿ, ದುಶ್ಚಟಗಳಿಂದ ದೂರವಿರಬೇಕು ಎಂದರು.
    ಯುವ ಮುಖಂಡ ಸುರೇಶ ಬಿಜಾಪುರ ಮಾತನಾಡಿದರು. ಪ್ರಾಚಾರ್ಯ ಡಾ. ಎಂ.ಎಸ್. ಝಳಕಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವ ದೇವರ ಹಾಗೂ ರಾಜು ಬಿರಾದಾರ ಉಪನ್ಯಾಸ ನೀಡಿದರು. ಜಿಲ್ಲಾ ಯುವ ಸಮನ್ವಯಾಧಿಕಾರಿ ರಾಹುಲ್ ಡೊಂಗರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ ಕಾಂಬಳೆ, ವೀಣಾ ನಾಯಕ, ಸೀಮಾ ತಳವಾರ ಮತ್ತಿತರರು ಉಪಸ್ಥಿತರಿದ್ದರು.
    ಸದಾಶಿವ ಚೌಧರಿ ಸ್ವಾಗತಿಸಿದರು. ಪ್ರೊ.ರೋಹಿಣಿ ಜತ್ತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts