More

    ವೆಲೊಡ್ರೋಮ್ ಪರಿಶೀಲನೆ ವರದಿ ಸಿದ್ಧಪಡಿಸಿ

    ವಿಜಯಪುರ: ನಗರದಲ್ಲಿ ಸುಸಜ್ಜಿತ ವೆಲೊಡ್ರೋಮ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಕುರಿತಂತೆ ತಾಂತ್ರಿಕ ಸಲಹೆಗಾಗಿ ತಕ್ಷಣ ನುರಿತ ತಜ್ಞರು ಪರಿಶೀಲನಾ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವೆಲೊಡ್ರೋಮ್ ನಿರ್ಮಾಣ ಕುರಿತಂತೆ ಸೈಕ್ಲಿಂಗ್ ಫೆಡರೆಷನ್, ಸೈಕ್ಲಿಂಗ್ ತರಬೇತಿದಾರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.
    ಕ್ರೀಡಾ ತಜ್ಞರನ್ನು ಒಳಗೊಂಡ ತಂಡವು ತ್ವರಿತವಾಗಿ ಭೇಟಿ ನೀಡಿ ವೆಲೊಡ್ರೋಮ್ ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿ ಪೂರ್ಣಗೊಳಿಸುವ ಕುರಿತಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು.
    ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಖ್ಯಾತಿ ಪಡೆದಿರುವ ವಿಜಯಪುರದಲ್ಲಿ ಅಂತಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯ ಅನುಕೂಲಕ್ಕಾಗಿ 7.34 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ವೆಲೊಡ್ರೋಮ್ ನಿರ್ಮಿಸುವ ಉದ್ದೇಶ ಹೊಂದಿ ಈಗಾಗಲೇ 3.7 ಕೋಟಿ ರೂ.ಗಳ ಅನುದಾನ ವೆಚ್ಚ ಮಾಡಲಾಗಿದೆ. ಬಾಕಿ ಕಾಮಗಾರಿಗಳು ಸೇರಿದಂತೆ ಈ ಸೈಕ್ಲಿಂಗ್ ವೆಲೊಡ್ರೋಮ್ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕ್ರೀಡಾ ಸಚಿವರ ಅಧ್ಯಕ್ಷತೆಯಲ್ಲಿ, ಜಿಲ್ಲೆಯ ಶಾಸಕರು, ಸೈಕ್ಲಿಂಗ್ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯೊಂದನ್ನು ೆಬ್ರವರಿ ಅಂತ್ಯಕ್ಕೆ ಬೆಂಗಳೂರಲ್ಲಿ ಆಯೋಜಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
    ವೆಲೊಡ್ರೋಮ್ ನಿರ್ಮಾಣ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಗ್ರ ವರದಿಯೊಂದಿಗೆ ಉಪಸ್ಥಿತರಿರುವಂತೆ ತಜ್ಞರಿಗೆ ಸೂಚಿಸಿರುವ ಜಿಲ್ಲಾಧಿಕಾರಿಗಳು ಯೋಜನಾಬದ್ಧವಾಗಿ ನಿಗದಿತ ಅವಧಿಯೊಳಗೆ ಈ ವೆಲೊಡ್ರೋಮ್ ನಿರ್ಮಿಸುವ ಕುರಿತು ಗುರಿ ನಿಗದಿಪಡಿಸುವಂತೆ ಸೂಚನೆ ನೀಡಿದರು.
    ಜಿಪಂ ಸಿಇಒ ಗೋವಿಂದ ರೆಡ್ಡಿ, ಹೈದ್ರಾಬಾದ್ ಸೈಕ್ಲಿಂಗ್ ೆಡರೇಷನ್ ಆ್ ಇಂಡಿಯಾದ ಕ್ರೀಡಾ ತಜ್ಞ ಮ್ಯಾಕ್ಸ್‌ವೆಲ್ ಟ್ರಾವೆರ್, ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ, ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಕುರಣಿ, ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ಎಸ್.ಜಿ. ಲೋಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts