More

    ಮಹಾಮಾರಿಗೆ ಮತ್ತೊಂದು ಬಲಿ?

    ವಿಜಯಪುರ: ಮಹಾಮಾರಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು ಮೃತರ ಸಂಖ್ಯೆ ಎರಡಕ್ಕೇರಿದೆ.
    ಶನಿವಾರ ಮತ್ತೆರಡು ಪಾಸಿಟಿವ್ ಪ್ರಕರಣ ಬಂದಿದ್ದು, ಇದರಲ್ಲಿ 42 ವರ್ಷ ವ್ಯಕ್ತಿ ಅಸು ನೀಗಿದ್ದಾನೆ. ಏ. 16 ರಂದೇ ಈತ ಮೃತಪಟ್ಟಿದ್ದು, ಇದೀಗ ಸೋಂಕು ದೃಢಪಟ್ಟ ವರದಿ ಬಂದಿದೆ. ಈತನನ್ನು ಪಿ 374 ಎಂದು ಗುರುತಿಸಲಾಗಿದ್ದು, ಪಿ 306 ಜತೆ ನೇರ ಸಂಪರ್ಕ ಹೊಂದಿದ್ದನು. ಈ ಮೊದಲೇ ಪಿ 306ಗೆ ಸೋಂಕು ದೃಢಪಟ್ಟಿದ್ದರಿಂದ ಪಿ 374 ಆಘಾತಕ್ಕೊಳಗಾಗಿದ್ದನು. ಹೀಗಾಗಿ ಈತ ಕರೊನಾದಿಂದ ಮೃತನಾದನೋ ಅಥವಾ ಹೃದಯಾಘಾತದಿಂದಲೋ ಎಂಬುದು ಸ್ಪಷ್ಟವಾಗಿಲ್ಲ.
    ಮೃತನಿಗೆ ಸೋಂಕು ದೃಢವಾದ ಹಿನ್ನೆಲೆ ಈತನ ಮರಣೋತ್ತರ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬ ಗೊಂದಲವಿದ್ದು, ಸರ್ಕಾರದ ನಿರ್ದೇಶನ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಾವಿಗೀಡಾದ ಪಿ 374 ಈತ ಕಾರ್ ಚಾಲಕನಾಗಿದ್ದು ಪಿ 306 ಜತೆ ಬೆಂಗಳೂರಿಗೆ ಹೋಗಿ ಬಂದಿದ್ದನು. ಮೂಲತಃ ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯ ಪೇದೆಯಾಗಿರುವ ಈತ ಪಿ 306 ಸಂಬಂಧಿ ಎನ್ನಲಾಗಿದೆ. ಮೃತನ ಕುಟುಂಬಸ್ಥರನ್ನು ಗೃಹಬಂಧನಕ್ಕೆ ಒಳಪಡಿಸಿದ್ದಾಗಿ ಜಿಲ್ಲಾಧಿಕಾರಿ ಪಾಟೀಲ ತಿಳಿಸಿದ್ದಾರೆ.

    21ಕ್ಕೇರಿದ ಪಾಸಿಟಿವ್ ಪ್ರಕರಣ

    60 ವರ್ಷದ ವೃದ್ಧನಿಗೂ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 21ಕ್ಕೇರಿದೆ. ಇದರಲ್ಲಿ ಇಬ್ಬರು ಮೃತರಾಗಿದ್ದು, 19 ಜನ ಸಕ್ರಿಯರಾಗಿದ್ದಾರೆ. ಸೋಂಕಿತ ವೃದ್ಧನಿಗೆ ಪಿ 362 ಎಂದು ಗುರುತಿಸಲಾಗಿದ್ದು, ಈತ ಪಿ 221 ಜತೆ ನೇರ ಸಂಪರ್ಕ ಹೊಂದಿದ್ದನು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಗೋವಿಂದ ರೆಡ್ಡಿ ಇದ್ದರು.

    ಜಿಲ್ಲೆಯಲ್ಲಿ 912 ಜನರ ಮೇಲೆ ನಿಗಾ ಇರಿಸಲಾಗಿದೆ. 471ಜನ ಗೃಹಬಂಧನದಲ್ಲಿದ್ದಾರೆ. 555 ಪರೀಕ್ಷಾ ವರದಿ ಕಳುಹಿಸಲಾಗಿದ್ದು ಇದರಲ್ಲಿ 433 ನೆಗೆಟಿವ್ ಬಂದಿದ್ದು ಇನ್ನೂ 101 ವರದಿ ಬಾಕಿ ಇವೆ. ಪಾಸಿಟಿವ್ ಪ್ರಕರಣಗಳಲ್ಲಿ ಎಲ್ಲರ ಆರೋಗ್ಯ ಸ್ಥಿರವಾಗಿದೆ.
    ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ

    ಮಹಾಮಾರಿಗೆ ಮತ್ತೊಂದು ಬಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts