More

    ಕೆರೆ ಒತ್ತುವರಿ ಸೂಕ್ತ ಕ್ರಮ ಕೈಗೊಳ್ಳಿ

    ವಿಜಯಪುರ : ಜಿಲ್ಲೆಯಲ್ಲಿ ಒತ್ತುವರಿಯಾದ ಕೆರೆಗಳನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ, ಮಸಬಿನಾಳ ಹಾಗೂ ಹೂವಿನಹಿಪ್ಪರಗಿ ಕೆರೆಗಳಿಗೆ ಸಂಬಂಧಿಸಿದ ಒತ್ತುವರಿ ಪ್ರಕರಣಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಗ್ರಾಮ ಪಂಚಾಯಿತಿಗಳ ಹಂತದಲ್ಲಿ ಕೆರೆಗಳ ಸಂರಕ್ಷಣಾ ಸಮಿತಿಯನ್ನು ರಚನೆ ಮಾಡಬೇಕಾಗಿದೆ. ಯಾವ ಗ್ರಾಮ ಪಂಚಾಯಿತಿಯಲ್ಲಿ ನೀರು ಬಳಕೆದಾರರ ಸಮಿತಿ ಇದೆಯೋ ಅದೇ ಸಮಿತಿಯನ್ನು ಕೆರೆಗಳ ಸಂರಕ್ಷಣಾ ಸಮಿತಿಯಾಗಿ ಪರಿಗಣಿಸಲು ಹಾಗೂ ಕುಂದುಕೊರತೆಗಳನ್ನು ಪರಿಗಣಿಸಲು ಸರ್ಕಾರದ ಸಲಹೆ ಇದೆೆ. ಆದ ಕಾರಣ ಜಲಮೂಲಗಳ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭಾಗವಹಿಸಬೇಕೆಂದು ತಿಳಿಸಿದರು.

    ಕೆರೆಗಳನ್ನು ಹೊರತುಪಡಿಸಿ ಕಲ್ಯಾಣಿ, ಕುಂಟೆ, ಕಟ್ಟೆ, ಗೋಕಟ್ಟೆ ಇತ್ಯಾದಿ ಜಲಮೂಲಗಳು ಇರುವ ಬಗ್ಗೆ ಗುರುತಿಸಬೇಕು ಮತ್ತು ಸರ್ವೇ ಮಾಡಬೇಕು. ಅವುಗಳನ್ನು ಸ್ವಚ್ಛಗೊಳಿಸಬೇಕು. ಕೆರೆಗಳಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸಿ ನೀರಿನ ಗುಣಮಟ್ಟವನ್ನು ಕಾಪಾಡಬೇಕು ಎಂದರು.

    ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಹಾಗೂ ಪರಿಸರ ಮತ್ತು ವಾಯುಮಾಲಿನ್ಯ ನಿಯಂತ್ರಣ ಇಲಾಖೆ, ಭೂಮಾಪನ ಇಲಾಖೆ ಅಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಜಲಾನಯನ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts