More

    ಕನ್ನಡಪರ ಸಂಘಟನೆಗಳ ಪ್ರತಿಭಟನೆ

    ವಿಜಯಪುರ: ಹಿಂದಿ ಹೇರಿಕೆಯ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರವೇ ಹಾಗೂ ಕರ್ನಾಟಕ ನವ ನಿರ್ಮಾಣ ವೇದಿಕೆ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಕರವೇ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಸಂವಿಧಾನ ಪರಿಚ್ಛೇದ 344, 345ರಲ್ಲಿ ಹಿಂದಿ ಭಾಷೆಗೆ ಉತ್ತೇಜನ ನೀಡುವ ಅಂಶಗಳಿವೆ. ಹಿಂದಿ ಹೇರಿಕೆ ಕನ್ನಡಿಗರ ಮೇಲೆ ಸಲ್ಲದು ಎಂದು ಖಾರವಾಗಿ ಹೇಳಿದರು.
    ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಕೃಷ್ಣಾಜಿ ಕುಲಕರ್ಣಿ ಮಾತನಾಡಿ, ಕರ್ನಾಟಕದಲ್ಲಿ ಮಾತೃಭಾಷೆಗೆ ಮಾನ್ಯತೆ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ನೆಲದಲ್ಲಿ ಅನ್ಯ ಭಾಷೆ ಹೇರಿಕೆಯ ಕೇಂದ್ರ ಸರ್ಕಾರದ ನೀತಿ ಸರಿ ಅಲ್ಲ ಎಂದರು.
    ರಾಯಣ್ಣ ಯುವಸೇನೆ ಅಧ್ಯಕ್ಷ ದೇವಕಾಂತ ಬಿಜ್ಜರಗಿ ಮಾತನಾಡಿ, ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಕೇಂದ್ರದ ಕ್ರಮವನ್ನು ಖಂಡಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಅಸಮಾನತೆ ಇರಕೂಡದು. ಸಾಂಸ್ಕೃತಿಕ ಬಹುತ್ವವನ್ನು ದಿಲ್ಲಿ ಆಡಳಿತ ಗೌರವಿಸಲೇಬೇಕು. ಎಲ್ಲ ರಾಜ್ಯಗಳಿಗೆ ತಮ್ಮ ತಮ್ಮ ಪಾಲು ದೊರೆಯಲೇ ಬೇಕು ಎಂದರು.
    ಕರವೇ ಕಾರ್ಯದರ್ಶಿ ಕೆ.ಕೆ. ಬನಟ್ಟಿ, ವಸಂತ ಕುಲಕರ್ಣಿ, ಬಾಸು ರಾಠೋಡ, ಭೀಮಾಶಂಕರಯ್ಯ ವಿರಕ್ತಮಠ, ಕುಮಾರ ವಾಗಮಡಿ, ಸಂತೋಷ ಕವಲಗಿ, ಮಲ್ಲಪ್ಪ ಬಿದರಿ, ಭೀರಪ್ಪ ಜುಮನಾಳ, ಸಂಜೀವ ಪಾಂಡ್ರೆ ಮತ್ತಿತರರಿದ್ದರು.

    ಕನ್ನಡಪರ ಸಂಘಟನೆಗಳ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts