More

    ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

    ವಿಜಯಪುರ: ಡ್ರಗ್ಸ್ ಮಾಫಿಯಾದಲ್ಲಿ ಶಾಮೀಲಾದವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
    ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಘೋಷಣೆ ಕೂಗಿದರು.
    ನಗರ ಯುವ ಮೋರ್ಚಾ ಅಧ್ಯಕ್ಷ ಸತೀಶ ಪಾಟೀಲ ಮಾತನಾಡಿ, ಕಳೆದ ಕೆಲವು ದಿನಗಳಿಂದ ರಾಜ್ಯದ ನೆಮ್ಮದಿ ಮತ್ತು ಹೆಸರನ್ನು ಕೆಡಿಸಿದ ಮಾದಕ ವಸ್ತು ಮಾರಾಟ ಜಾಲ ಮತ್ತು ಸೇವನೆಯ ವಿರುದ್ಧ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವಾಲಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸಂತಸದ ಸಂಗತಿ. ಅದೇ ರೀತಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತನಿಖೆ ನಡೆಸಿ ಡ್ರಗ್ಸ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕೆಂದರು.
    ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಸಗಾಯಿ ಮಾತನಾಡಿ, ಯಾವುದೇ ಒತ್ತಡ ಪ್ರಭಾವಗಳಿಗೆ ಮಣಿಯದೆ ನಿಕ್ಷಪಕ್ಷಪಾತವಾಗಿ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತೇವೆ ಹಾಗೂ ಬಿಜೆಪಿ ಯುವ ಮೋರ್ಚಾ ಜನಜಾಗೃತಿ ಮೂಲಕ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತದೆ ಎಂದರು
    ನಗರ ಅಧ್ಯಕ್ಷ ಮಳುಗೌಡ ಪಾಟೀಲ ಮಾತನಾಡಿ, ಡ್ರಗ್ಸ್ ದಂಧೆ ಮಟ್ಟಹಾಕುವಲ್ಲಿ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ಬದ್ಧತೆ ನಿಜಕ್ಕೂ ಪ್ರಶಂಸನೀಯ.
    ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಯಾವ ಸಮೂಹದಿಂದ ಪ್ರಬಲ ಭಾರತ ನಿರ್ಮಿಸಲು ಸಾಧ್ಯವೋ, ಅಂತಹ ಯುವ ಸಮುದಾಯವನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವ ಹುನ್ನಾರ ಈಚೆಗೆ ನಡೆಯುತ್ತಿದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ನಡೆದಲ್ಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದರು.
    ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಮುಖಂಡರಾದ ಶಿವರುದ್ರ ಬಾಗಲಕೋಟ, ಬಸವರಾಜ ಹೂಗಾರ, ಮಲ್ಲಮ್ಮ ಜೋಗೂರ, ಗೋಪಾಲ ಘಟಕಾಂಬಳೆ, ಕಾಂತು ಸಿಂಧೆ, ರಾಜು ವಾಲಿ, ಕೃಷ್ಣಾ ಗುನ್ನಾಳಕರ, ವಿಜಯ ಜೋಶಿ, ಪಾಪುಸಿಂಗ ರಜಪೂತ, ವಿಕಾಸ ಪದಕಿ, ಅನೀಲ ಚವಾಣ್, ಆನಂದ ಮುಚ್ಚಂಡಿ, ಪ್ರಶಾಂತ ಅಗಸರ, ಅನೀಲ ಉಪ್ಪಾರ, ಬಸವರಾಜ ಗೊಳಸಂಗಿ, ಪರಸು ಹೊಸಪೇಠ, ಶರಣಬಸು ಕುಂಬಾರ, ರಾಜಶೇಖರ ತಾಳಿಕೋಟಿ, ರವಿ ಚವಾಣ್, ಚಂದ್ರು ಚೌಧರಿ, ರಾಹುಲ ಜಾಧವ, ರಾಕೇಶ ಕುಲಕರ್ಣಿ, ಉಮೇಶ ವೀರಕರ, ವಿನಾಯಕ ದಹಿಂಡೆ, ಅನೀಲ ಕೊಂಗಿ, ಆದಿತ್ಯ ಬಿರಾದಾರ, ಕಿರಣ ನಾಯಕ ಮತ್ತಿತರರಿದ್ದರು.

    ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts