More

    ರಾಯಣ್ಣ ಪ್ರತಿಮೆ ಪುನಃ ಸ್ಥಾಪಿಸಿ

    ವಿಜಯಪುರ: ಬೆಳಗಾವಿಯ ಪೀರನವಾಡಿಯಲ್ಲಿ ತೆರವುಗೊಳಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪುನಃ ಸ್ಥಾಪಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಬುಧವಾರ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಬೆಳಗಾವಿ ಜಿಲ್ಲೆಯ ಪೀರನವಾಡಿ ಘಟನೆ ತೀವ್ರ ಖಂಡನೀಯ. ಸಂಗೊಳ್ಳಿ ರಾಯಣ್ಣ ಈ ನಾಡಿನ ಅಪ್ರತಿಮ ದೇಶಭಕ್ತ. ಆ. 15ರ ಸ್ವಾತಂತ್ರೃದಿನದಂದೇ ರಾಯಣ್ಣನ ಜಯಂತಿ. ಅದೇ ದಿನ ಮೂರ್ತಿ ತೆರವುಗೊಳಿಸಿದ್ದು ದುರದೃಷ್ಟಕರ ಸಂಗತಿ ಎಂದರು.
    ನಾಡು, ನುಡಿ, ಜಲ ಮತ್ತು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಡಿ ತನ್ನ ಪ್ರಾಣವನ್ನೇ ಬಲಿಕೊಟ್ಟಂತಹ ರಾಯಣ್ಣನವರ ಪ್ರತಿಮೆಯನ್ನು ತಕ್ಷಣವೇ ಪುನಃ ಸ್ಥಾಪಿಸಿ ಅವರಿಗೆ ಗೌರವ ಸಲ್ಲಿಸಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಉಪಾಧ್ಯಕ್ಷ ಮಹಾದೇವ ರಾವಜಿ, ಸಂಚಾಲಕರಾದ ಸಾಯಬಣ್ಣ ಮಡಿವಾಳರ, ದಸ್ತಗೀರ ಸಾಲೋಟಗಿ, ರವಿ ಕಿತ್ತೂರ, ಅಡಿವೆಪ್ಪ ಸಾಲಗಲ್, ಯಾಜ ಕಲಾದಗಿ, ವಿನೋದ ದಳವಾಯಿ, ಭರತ ಕೋಳಿ, ರಜಾಕ ಕಾಖಂಡಕಿ, ಬಸವರಾಜ ಕಾತ್ರಾಳ, ಶಹಾಜಾನ ಖಾದ್ರಿ, ಎಸ್.ವೈ. ನಡುವಿನಕೇರಿ, ತಾಜೋದ್ದೀನ ಕಲಿಪಾ, ಅಕ್ರಂ ಮಾಶ್ಯಾಳಕರ, ರಾಜು ಕಂಬಾಗಿ ಮತ್ತಿತರರಿದ್ದರು.

    ರಾಯಣ್ಣ ಪ್ರತಿಮೆ ಪುನಃ ಸ್ಥಾಪಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts