More

    ಗುಣಾತ್ಮಕ ಶಿಕ್ಷಣಕ್ಕೆ ಹೆಸರು

    ವಿಜಯಪುರ: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ 20ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

    ನಿರ್ದೇಶಕ ಭರತ ಬಿರಾದಾರ ಮಾತನಾಡಿ, ಕಳೆದ 20 ವರ್ಷದಲ್ಲಿ ಈ ಸಂಸ್ಥೆ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಸ್ಥೆಯಾಗಿ ಬೆಳೆದಿದೆ. ಗುಣಾತ್ಮಕ ಶಿಕ್ಷಣಕ್ಕೆ ಸಂಸ್ಥೆ ಹೆಸರಾಗಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆಲ್ಲ ಕಾರಣ ಇಲ್ಲಿಯ ಶಿಕ್ಷಕರು ಎಂದರು.

    ನಿರ್ದೇಶಕಿ ದಿವ್ಯಾ ಶರತ ಬಿರಾದಾರ ಮಾತನಾಡಿ, ಪಾಲಕರ, ಶಿಕ್ಷಕರ ಸಹಕಾರ ಮತ್ತು ಸೇವೆಯಿಂದ ಇಂದು ಈ ಸಂಸ್ಥೆ ಯಶಸ್ಸು ಗಳಿಸಿದೆ ಎಂದರು.

    ಪ್ರಾಚಾರ್ಯ ಶ್ರೀಧರ ಕುರಬೆಟ್ ಮಾತನಾಡಿದರು. ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ.ಎಚ್. ಸಗರ, ಅಶ್ವಿನ ವಗದರಗಿ, ಸವಿತಾ ಪಾಟಿಲ, ದೀಪಾ ತಿಳಿಗೂಳ, ಶ್ರೀದೇವಿ ಜೋಳದ, ಮೀನಾಕ್ಷಿ ಹಿಪ್ಪರಗಿ ಮತ್ತಿತರರಿದ್ದರು.
    ವಿದ್ಯಾರ್ಥಿನಿ ರುಚಿ ಜೈನ ನಿರೂಪಿಸಿದಳು. ಸಹ ಶಿಕ್ಷಕಿ ಹೀನಾಕೌಸರ್ ವಂದಿಸಿದರು. ಸಂಸ್ಥಾಪನೆ ದಿನದಂದು ಜನಿಸಿದ ಮಕ್ಕಳಿಗೆ ಜನ್ಮದಿನದ ಶುಭಾಶಯ ಹೇಳಿ ಸಿಹಿ ಹಂಚಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts