More

    ವಿದ್ಯಾರ್ಥಿ ಜೀವನ ಬಹಳ ಅಮೂಲ್ಯ

    ವಿಜಯಪುರ: ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದುದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ವ್ಯರ್ಥ ಕಾಲ ಕಳೆಯದೆ ಆಸಕ್ತಿಯಿಂದ ಚೆನ್ನಾಗಿ ಓದಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವೇಂದ್ರ ಹೆಳವರ ಹೇಳಿದರು.

    ನಗರದ ಬಾಗಲಕೋಟೆ ರಸ್ತೆಯ ಬೆನಕಟ್ಟಿ ಪಿಯು ಸೈನ್ಸ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಹೆಳವರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹೆಳವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನಾದರೂ ಒಂದು ಒಳ್ಳೆಯ ಗುರಿ ಇರಬೇಕು. ಆ ಗುರಿ ಸಾಧಿಸಲು ಪರಿಶ್ರಮ ಪಡಬೇಕು. ನಿರಂತರ ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ಯಶಸ್ಸು ದೊರಕುತ್ತದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಮಾವಿನಬಾವಿಯ ಬಸವರಾಜ ಗುರೂಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬರಿಗೂ ಗುರುವಿನ ಆಶೀರ್ವಾದ ಬೇಕು. ಗುರುವಿನ ಅನುಗ್ರಹವಿದ್ದರೆ ಜೀವನದಲ್ಲಿ ಸಂತೋಷ ಹಾಗೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.

    ಜಿಲ್ಲಾ ಹೆಳವರ ಸಂಘದ ಮುಖಂಡ ಬಾಬು ಹೆಳವರ ಮಾತನಾಡಿ, ಹೆಳವ ಸಮಾಜವು ಹಿಂದುಳಿದ ಚಿಕ್ಕ ಸಮಾಜ. ಸಮಾಜ ಬಾಂಧವರು ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದರು.

    ಎಸ್‌ಎಸ್‌ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ತೇರ್ಗಡೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕಾಶೀನಾಥ ಹೆಳವರ(ಬಿ.ಸಾಲವಾಡಗಿ), ಪೂಜಾ ನಿಂಗದಳ್ಳಿ(ಕನಮಡಿ), ಭವಾನಿ ಹೆಳವರ(ಮದಭಾವಿ), ಸುಮತಿ ಭೈರಾಮಡಗಿ(ಇಂಡಿ), ಸವಿತಾ ಹೆಳವರ(ಸಿಂದಗೇರಿ), ಕಾಶೀನಾಥ ಕಕ್ಕಳಮೇಲಿ(ಮಾವಿನಬಾವಿ) ಅವರಿಗೆ ನಗದು ಪುರಸ್ಕಾರ, ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಚಿಕ್ಕಬೇವನೂರ ಗ್ರಾಪಂ ನೂತನ ಸದಸ್ಯರಾಗಿ ಆಯ್ಕೆಯಾದ ಜಯಶ್ರೀ ವೆಂಕಟೇಶ ಭೈರಾಮಡಗಿ ಹಾಗೂ ಕನಮಡಿ ಗ್ರಾಪಂ ಸದಸ್ಯೆ ಅಂಬವ್ವ ಹೆಳವರ ಅವರನ್ನು ಸನ್ಮಾನಿಸಲಾಯಿತು.

    ಡಾ.ದಿಲೀಪ ಗಂಜಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಸಂಗಮೇಶ ಐಹೊಳೆ, ಬೆನಕಟ್ಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್. ವಿ. ಬೆನಕಟ್ಟಿ ಪಾಟೀಲ, ಪರಶುರಾಮ ಅಂಗಡಿ, ಶರಣಪ್ಪ ಹೆಳವರ, ಸಂತೋಷ ಹೆಳವರ, ದತ್ತು ಹೆಳವರ, ವೀರೇಶ ಹೆಳವರ, ರಾಮಣ್ಣ ಹೆಳವರ(ಕನಮಡಿ), ವೆಂಕಟೇಶ ಭೈರಾಮಡಗಿ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts