More

    ಸಹೃದಯಿಗಳಿಂದ ಕಲಾಕೃತಿ ಮೌಲ್ಯ ವೃದ್ಧಿ

    ವಿಜಯಪುರ: ಸಹೃದಯನ ವೈವಿಧ್ಯಮಯ ದೃಷ್ಟಿಕೋನಗಳು ಕಲಾಕೃತಿಯ ಮೌಲ್ಯವನ್ನು ನಿರ್ಧರಿಸಬಲ್ಲವು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಮಹೇಶ ಪೋದ್ದಾರ ಹೇಳಿದರು.
    ನಗರದ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಿಂದ ಸೋಮವಾರ ಹಮ್ಮಿಕೊಂಡಿದ್ದ ಕಲಾವಿದ ನಟರಾಜ ಎಂ. ಶಿಲ್ಪಿ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶದಲ್ಲಿ ಅವರು ಮಾತನಾಡಿದರು.
    ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿ, ಮುಂದಿನ ದಿನಗಳಲ್ಲಿ ಕಲಾ ಗ್ಯಾಲರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಪಿ.ಎಸ್. ಕಡೇಮನಿ ಮಾತನಾಡಿ, ಕಲಾ ಪ್ರದರ್ಶನಗಳು ನಿರಂತರವಾಗಿ ನಡೆದಾಗ ಮಾತ್ರ ಗ್ಯಾಲರಿಗಳು ಮಹತ್ವ ಪಡೆಯುತ್ತವೆ ಎಂದು ಹೇಳಿದರು.
    ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಅಧ್ಯಕ್ಷತೆ ವಹಿಸಿ, ಶಾಲಾ ಶಿಕ್ಷಣದಲ್ಲಿ ಶಿಲ್ಪಕಲೆ ವಿಷಯವನ್ನು ಅಳವಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನೋಹರ ಕಾಳಪ್ಪ ಪತ್ತಾರ ಮಾತನಾಡಿ, ಕಲಾವಿದ ನಟರಾಜ ಶಿಲ್ಪಿಯವರ ಕಲಾಕೃತಿಗಳು ಯುವ ಕಲಾವಿದರಿಗೆ ಪ್ರೇರಕವಾಗಿವೆ ಎಂದರು. ಲಲಿತಕಲಾ ಅಕಾಡೆಮಿ ಸದಸ್ಯ ರಮೇಶ ಚವಾಣ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಿ ಕಲಾವಿದ ಧ್ರುವ ಪತ್ತಾರ, ಡಾ.ಎಂ.ಎಂ. ಪಲ್ಲದಿನ್ನಿ, ಬ್ರಹ್ಮಾನಂದ ಮಾಯಾಚಾರಿ, ಗೋರಖ ಭಾವಸಾರ, ವೆಂಕಟೇಶ ಕಾಚಾಪುರ ಹಾಗೂ ಯುವ ಕಲಾವಿದರು ಉಪಸ್ಥಿತರಿದ್ದರು. ಸುವರ್ಣ ಕನ್ನೊಳ್ಳಿ ಸ್ವಾಗತಗೀತೆ ಹಾಡಿದರು. ರಮೇಶ ಚವಾಣ್ ವಂದಿಸಿದರು.

    ಕಲಾವಿದರೊಂದಿಗೆ ಸಂವಾದ

    ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಅವರೊಂದಿಗೆ ನಗರದ ಕಲಾವಿದರು ಸಂವಾದ ನಡೆಸಿದರು. ಅಕಾಡೆಮಿಯ ಯೋಜನೆಗಳನ್ನು ಕಲಾವಿದರು ಪಡೆದುಕೊಳ್ಳಬೇಕೆಂದು ಅವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts