More

    ಮೂರು ಕಂಟ್ರಿ ಪಿಸ್ತೂಲ್ ವಶ

    ವಿಜಯಪುರ: ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 3 ಕಂಟ್ರಿ ಪಿಸ್ತೂಲ್, 2 ಜೀವಂತ ಗುಂಡು, 10 ಡಿಬಿಬಿಎಲ್ ಜೀವಂತ ಗುಂಡು, ಕಬ್ಬಿಣದ ಪೈಪ್‌ನಿಂದ ತಯಾರಿಸಿದ್ದ 2 ಕಂಟ್ರಿ ಆಯುಧ, 3 ಮಚ್ಚು, 1 ಚಾಕು ವಶಪಡಿಸಿಕೊಂಡಿದ್ದಾರೆ.
    ಇಂಡಿ ತಾಲೂಕಿನ ಗರಗುಡಿ ಗ್ರಾಮದ ಸುಧೀರ ಉರ್ಫ್ ಭೀಮಾಶಂಕರ ಕಾಮಣ್ಣ ಕ್ಷತ್ರಿ (25) ಹಾಗೂ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಹಣಮಂತ ಯಲ್ಲಪ್ಪ ಹಳ್ಳಿ (40) ಬಂಧಿತ ಆರೋಪಿಗಳು. ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
    ಬರಗುಡಿ ಗ್ರಾಮದ ಸುಧೀರ ಉರ್ಫ್ ಭೀಮಾಶಂಕರ ಕಾಮಣ್ಣ ಕ್ಷತ್ರಿ ಈತನ ಹೋಟೆಲ್‌ನಲ್ಲಿ ದಸ್ತಗಿರಿ ಮಾಡಿ 2 ಕಂಟ್ರಿ ಪಿಸ್ತೂಲ್, 10 ಡಿಬಿಬಿಎಲ್ ಜೀವಂತ ಗುಂಡುಗಳು, ಕಬ್ಬಿಣದ ಪೈಪ್‌ನಿಂದ ತಯಾರಿಸಿದ 2 ಕಂಟ್ರಿ ಆಯುಧಗಳು, 3 ಮಚ್ಚು, 1 ಚಾಕು ವಶಕ್ಕೆ ಪಡೆಯಲಾಗಿದೆ. ಉಪ್ಪಲದಿನ್ನಿಯ ಹಣಮಂತ ಯಲ್ಲಪ್ಪ ಹಳ್ಳಿ ಈತನಿಂದ 1 ಕಂಟ್ರಿ ಪಿಸ್ತೂಲ್ ಹಾಗೂ 2 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಇಬ್ಬರಿಂದ ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳ ಮೌಲ್ಯ 77 ಸಾವಿರ ಎಂದು ಅಂದಾಜಿಸಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದ್ದು ಇನ್ನೂ ಮೂವರು ಪರಾರಿಯಾಗಿದ್ದಾರೆ.
    ಕಾರ್ಯಾಚರಣೆಯಲ್ಲಿ ಅಪರಾಧ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುನೀಲ ಕಾಂಬಳೆ, ಇನ್ಸ್‌ಪೆಕ್ಟರ್ ಜಯವಂತ ದುಲಾರಿ, ಎಸ್.ಪಿ. ಕಟ್ಟಿಮನಿ, ಸಿಬ್ಬಂದಿಗಳಾದ ಐ.ಬಿ. ಮದ್ದರಕಿ, ಅನೀಲ ದೊಡಮನಿ, ರಾಜು ನಾಯಕ, ಎಂ.ಎಸ್. ದೌಲತಕೋಟಿ, ವಿ.ಎಚ್. ಬಿರಾದಾರ, ಎ.ಡಿ. ರಿಸಾಲದಾರ, ಎಂ.ಎಂ. ಕುರುವಿಶೆಟ್ಟಿ, ಪಿ.ಎಂ. ಪಾಟೀಲ, ಶರಣು ಐಹೊಳ್ಳಿ, ಶಿವಾನಂದ ಅಳ್ಳಿಗಿಡದ, ಎ.ಎ. ಗದ್ಯಾಳ, ಎಂ.ಬಿ. ಪಾಟೀಲ, ಎಸ್.ಜಿ. ಗಾಯನ್ನವರ, ಎಂ.ಎಂ. ಅಂಬಿಗೇರ, ಕೆ.ಜೆ. ರಾಠೋಡ, ಎಂ.ಎಚ್. ಖಾನೆ, ಎ.ಎಚ್. ಪಾಟೀಲ, ಬಿ.ಎಂ. ಗೊಳಸಂಗಿ ಮತ್ತಿತರರಿದ್ದರೆಂದು ಎಸ್‌ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.

    ಮೂರು ಕಂಟ್ರಿ ಪಿಸ್ತೂಲ್ ವಶ
    ಮೂರು ಕಂಟ್ರಿ ಪಿಸ್ತೂಲ್ ವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts