More

    ವೆಂಟಿಲೇಟರ್ ಬೆಡ್‌ಗಳ ಕೊರತೆ

    ವಿಜಯಪುರ: ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿದ್ದು, ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ವೆಂಟಿಲೇಟರ್ ಬೆಡ್‌ಗಳ ಕೊರತೆ ಎದುರಾಗಿದೆ.

    ಜಿಲ್ಲೆಯಲ್ಲಿ 26 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವುಗಳಲ್ಲಿ ಭಾಗಶಃ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಬೆಡ್‌ಗಳ ಕೊರತೆಯಾಗಿದ್ದು, ಇದರಿಂದಾಗಿ ಸೋಂಕಿತರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.

    ಯಾವ್ಯಾವ ಆಸ್ಪತ್ರೆಯಲ್ಲಿ ಕೊರತೆ
    ಜಿಲ್ಲೆಯ ಒಟ್ಟು 26 ಆಸ್ಪತ್ರೆಗಳಲ್ಲಿ 116 ವೆಂಟಿಲೇಟರ್ ಬೆಡ್ ಸೌಲಭ್ಯವಿದ್ದು, ಅದರಲ್ಲಿ 16 ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಬೆಡ್‌ಗಳ ಕೊರತೆ ಇದೆ. 101 ವೆಂಟಿಲೇಟರ್ ಬೆಡ್‌ಗಳು ಭರ್ತಿಯಾಗಿವೆ. ಇನ್ನೂ 15 ಬೆಡ್‌ಗಳು ಮಾತ್ರ ಲಭ್ಯವಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

    ವಿಜಯಪುರ ಅಲ್-ಅಮೀನ್ ಆಸ್ಪತೆ, ಆಯುಷ್ ಆಸ್ಪತ್ರೆ, ಬಾಗಮರೆ ಆಸ್ಪತ್ರೆ, ಬಂಜಾರ ಆಸ್ಪತ್ರೆ, ಬಿಎಲ್‌ಡಿಇ ಆಸ್ಪತ್ರೆ, ಚೌಧರಿ ಆಸ್ಪತ್ರೆ, ಧನ್ವಂತರಿ, ಜಿಲ್ಲಾಸ್ಪತ್ರೆ, ಡಾ. ಬಿದರಿ ಆಸ್ಪತ್ರೆ, ಡಾ. ಮುನೀರ್ ಬಾಂಗಿ ಆಸ್ಪತ್ರೆ, ಹುಸೈನ್ ಆಸ್ಪತ್ರೆ, ಕರ್ಪೂರಮಠ ಆಸ್ಪತ್ರೆ, ಮುಳವಾಡ ಆಸ್ಪತ್ರೆ, ಮುದ್ದೇಬಿಹಾಳ ತಾಲೂಕು ಆಸ್ಪತ್ರೆ, ವೇದಾಂತ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್‌ಗಳ ಕೊರತೆ ಕಾಡುತ್ತಿದೆ.

    ಪ್ರಸ್ತುತ 1,510 ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1798 ಬೆಡ್‌ಗಳ ಸೌಲಭ್ಯವಿದ್ದು, ಅದರಲ್ಲಿ 288 ಬೆಡ್‌ಗಳು ಇವೆ. ಅದರಲ್ಲಿ ಸಾಮಾನ್ಯ ಬೆಡ್ 241 ಹಾಗೂ 47 ಐಸಿಯು ಬೆಡ್‌ಗಳ ಲಭ್ಯತೆ ಇದೆ.

    ಮೃತರ ಸಂಖ್ಯೆ 238ಕ್ಕೆ ಏರಿಕೆ
    ಜಿಲ್ಲೆಯಲ್ಲಿ ದಿನೇ ದಿನೆ ಕರೊನಾ ಸೋಂಕಿನಿಂದ ಮೃತಪಟ್ಟರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ವರೆಗೆ 238 ಜನರು ಮೃತಪಟ್ಟಿದ್ದಾರೆ. ಶುಕ್ರವಾರ ಮೂವರನ್ನು ಮಹಾಮಾರಿ ಬಲಿ ಪಡೆದಿದೆ. 66 ವರ್ಷದ ಇಬ್ಬರು ವೃದ್ಧರು, 60 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ 485 ಜನರಿಗೆ ಕರೊನಾ ಪಾಸಿಟಿವ್ ದೃಢವಾಗಿದೆ. ವಿಜಯಪುರ ನಗರದಲ್ಲಿ 192, ವಿಜಯಪುರ ಗ್ರಾಮೀಣ 39, ಬಸವನ ಬಾಗೇವಾಡಿ 54, ಮುದ್ದೇಬಿಹಾಳ 66, ಸಿಂದಗಿ 60, ತಾಳಿಕೋಟೆ 7, ಬಬಲೇಶ್ವರ ಹಾಗೂ ತಿಕೋಟಾದಲ್ಲಿ ತಲಾ ನಾಲ್ವರಿಗೆ ಕೊಲ್ಹಾರದಲ್ಲಿ ಒಬ್ಬರಿಗೆ, ನಿಡಗುಂದಿಯಲ್ಲಿ ಮೂವರಿಗೆ ಹಾಗೂ ಇತರ ಜಿಲ್ಲೆಯ ನಾಲ್ವರಿಗೆ ಸೋಂಕು ದೃಢವಾಗಿದೆ. ಇನ್ನೂ2,514 ಜನರ ವರದಿ ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts