More

    ಲಸಿಕೆ ಬಗ್ಗೆ ಅನಗತ್ಯ ಭಯ ಬೇಡ

    ವಿಜಯಪುರ: ಕರೊನಾ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ತೊಂದರೆಯಿಲ್ಲ. ಅನಗತ್ಯ ಭಯ ಬಿಟ್ಟು ಜನ ಲಸಿಕೆ ಹಾಕಿಸಿಕೊಳ್ಳಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

    ಸ್ಥಳೀಯ ಆದರ್ಶ ನಗರದ ವಾರ್ಡ್ ನಂ.4ರ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಸೋಮವಾರ ಕರೊನಾ ಲಸಿಕೆ ಉಚಿತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಶ್ರೀ ಸಿದ್ಧೇಶ್ವರ ಸಂಸ್ಥೆಯ ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸಿಸ್ ಸೆಂಟರ್‌ನಲ್ಲಿ ಬಡವರಿಗಾಗಿ 27ಬೆಡ್, 7ಐಸಿಯು, 25 ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದ್ದು ಗುರುವಾರದಿಂದ ಪ್ರಾರಂಭಿಸಲಾಗುವುದು ಎಂದರು.

    ನಗರದ ಎಲ್ಲ ಜನರು ಲಸಿಕೆ ಪಡೆದುಕೊಳ್ಳಿ. ವಿಜಯಪುರ ನಗರವನ್ನು ಕರೊನಾ ಮುಕ್ತ ಮಾಡಿ. ನಗರದಲ್ಲಿ ಕರೊನಾ ಲಸಿಕಾ ಅಭಿಯಾನ ಪ್ರಾರಂಭ ಮಾಡಿದಾಗಿನಿಂದ ನಗರವು ಈಗಾಗಲೇ ಶೇ.42 ರಷ್ಟು ಗುರಿ ಸಾಧಿಸಿದೆ. ಮುಂದಿನ ದಿನಗಳಲ್ಲಿ ಶೇ.100 ರಷ್ಟು ಸಾಧನೆಯಾಗಬೇಕೆಂದರು.

    ಆರೋಗ್ಯ ಅಧಿಕಾರಿ ಡಾ.ಕವಿತಾ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯ ಎಂ.ಎಸ್.ಕರಡಿ, ಮುಖಂಡ ಚಂದ್ರು ಚೌಧರಿ, ಶ್ರೀನಿವಾಸ ಬೆಟಗೇರಿ, ರಾಜಶೇಖರ ಭಜಂತ್ರಿ, ಪ್ರಮೋದ ಕುಲಕರ್ಣಿ, ಪ್ರಕಾಶ ಚವ್ಹಾಣ್, ನಾಗರಾಜ ಮುಳವಾಡ, ರಾಜುಗೌಡ ಪಾಟೀಲ, ಮಿಲಿಂದ್ ಚಿಂಚಲಕರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts