More

    ಜಿಲ್ಲೆಯಲ್ಲಿ ಕರೊನಾ ಶತಕದಾಟ

    ವಿಜಯಪುರ : ಜಿಲ್ಲೆಯಲ್ಲಿ ಮತ್ತೆ ಕರೊನಾ ಶತಕದಾಟ ಮುಂದುವರಿದಿದ್ದು, ಸೋಮವಾರ 122 ಜನರಿಗೆ ಕೋವಿಡ್ ಸೋಂಕು ಇರುವುದು ದೃಢವಾಗಿದೆ. ಇದರಿಂದಾಗಿ ಈವರೆಗೆ ಸೋಂಕಿತರ ಸಂಖ್ಯೆ 7399ಕ್ಕೇರಿಕೆಯಾಗಿದೆ.
    ಕರೊನಾದಿಂದ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 123ಕ್ಕೇರಿದೆ. ಇನ್ನೂ 119 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 6631 ಜನರು ಗುಣಮುಖರಾಗಿದ್ದಾರೆ.
    ಒಟ್ಟು 80,029 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 72,529 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 101 ಜನರ ವರದಿ ಬರಬೇಕಿದೆ. 645 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 59,471 ಜನರ ಮೇಲೆ ನಿಗಾ ವಹಿಸಲಾಗಿದೆ. 46,612 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 6,631 ಜನರು ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

    ತಾಲೂಕುವಾರು ಮಾಹಿತಿ

    ವಿಜಯಪುರ ತಾಲೂಕು ವ್ಯಾಪ್ತಿ 3700, ಬಸವನ ಬಾಗೇವಾಡಿ 770, ಬಬಲೇಶ್ವರ 67, ಚಡಚಣ 42, ದೇವರಹಿಪ್ಪರಗಿ 62, ಇಂಡಿ 672, ಕೊಲ್ಹಾರ 84, ಮುದ್ದೇಬಿಹಾಳ 756, ನಿಡಗುಂದಿ 46, ಸಿಂದಗಿ 648, ತಾಳಿಕೋಟೆ 247, ತಿಕೋಟಾ 81 ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 224 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts