More

    ಜನರ ಹಿತಾಸಕ್ತಿಯೇ ಕೈಪಕ್ಷದ ಗುರಿ

    ವಿಜಯಪುರ: ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದ್ದು, ಪಕ್ಷ ಕೇವಲ ಅಧಿಕಾರಕ್ಕಾಗಿ ಹೋರಾಟ ಮಾಡದೇ ಸಮಸ್ತ ದೇಶದ ಜನರ ಹಿತಾಸಕ್ತಿ ಹಾಗೂ ಏಳಿಗೆಗಾಗಿ ದುಡಿಯುತ್ತಿದೆ ಎಂದು ಮಾಜಿ ಸಚಿವ ಹಾಗೂ ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
    ಜೂ.7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪದಗ್ರಹಣ ಕಾರ್ಯಕ್ರಮ ಯಶಸ್ಸಿನ ಕುರಿತು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ರಾಜ್ಯದ ಸಮಸ್ತ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಸಾಮಾಜಿಕವಾಗಿ ಹಾಗೂ ಪರೋಕ್ಷವಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡು ಪ್ರಮಾಣವಚನ ಸ್ವೀಕರಿಸಬೇಕು. ಈ ಕಾರ್ಯಕ್ರಮ ಪಕ್ಷದ ಸಂಘಟನೆಗೆ ಸಹಕಾರಿಯಾಗಲಿದ್ದು, ಪಕ್ಷ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ತಾವೆಲ್ಲ ಈ ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಬೇಕೆಂದು ಹೇಳಿದರು.

    ಮಾಜಿ ಶಾಸಕ ರಾಜು ಆಲಗೂರ ರವರು ಕಾರ್ಯಕ್ರಮದ ಯಶಸ್ವಿ ಕುರಿತು ಮಾತನಾಡಿದರು. ಮಾಜಿ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, 2018ರ ಅಭ್ಯರ್ಥಿ ಅಬ್ದುಲ್‌ಹಮೀದ್ ಮುಶ್ರಿಫ್, ಮಲ್ಲಣ್ಣ ಸಾಲಿ, ವಿಜಯಪುರ ಜಿಲ್ಲೆಯ ಕಾರ್ಯಕ್ರಮದ ಉಸ್ತುವಾರಿ ವೀಕ್ಷಕ ಶಾಕೀರ್ ಸನದಿ, ರಾಜಶೇಖರ ಮೆಣಸಿನಕಾಯಿ, ಅನ್ವರ್ ಮುಧೋಳ, ಚಂದ್ರಶೇಖರ ರಾಠೋಡ, ದಯಾನಂದ ಪಾಟೀಲ, ಸುನೀತಾ ಐಹೊಳೆ, ಶರಣಪ್ಪ ಕೊಟಗಿ, ಜಿಲ್ಲಾ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಜಿಲ್ಲಾ ಟಾಸ್ಕ್ ಪೋರ್ಸ್ ಅಧ್ಯಕ್ಷ ಮಹ್ಮದ್‌ರಫೀಕ್ ಟಪಾಲ್, ರಾಜ್ಯ ಕೆಪಿಸಿಸಿ ಮುಖಂಡರಾದ ರವಿಗೌಡ ಪಾಟೀಲ, ಹಾಸಿಂಪೀರ್ ವಾಲಿಕಾರ್, ಎಸ್.ಎಂ. ಪಾಟೀಲ(ಗಣಿಹಾರ), ಸುರೇಶ ಗೊಣಸಗಿ, ಸುನೀಲ ಉಕ್ಕಲಿ, ವಿದ್ಯಾರಾಣಿ ತುಂಗಳ, ಸುಜಾತ ಕಳ್ಳಿಮನಿ ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts