More

    ಸ್ವಯಂ ಉದ್ಯೋಗ ಕೈಗೊಳ್ಳಿ

    ವಿಜಯಪುರ: ಪ್ರತಿಯೊಬ್ಬರೂ ಆರ್ಥಿಕ ಸದೃಢತೆಗಾಗಿ ಸ್ವಯಂ ಉದ್ಯೋಗ ಮಾಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಡಿ.ಎಸ್.ಗುಡ್ಡೋಡಗಿ ಹೇಳಿದರು.
    ನಗರದ ಸಿಕ್ಯಾಬ್ ಸಂಸ್ಥೆಯಲ್ಲಿ ಬುಧವಾರ ನಡೆದ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಕ್ಯಾಬ್ ಸಂಸ್ಥೆ ಭಾವೈಕ್ಯತೆಗೆ ಮಾದರಿಯಾಗಿದ್ದು, ಎಲ್ಲ ಜಾತಿ, ಮತ, ಪಂಥದವರಿಗೆ ಕಲಿಯುವ ಮತ್ತು ಉದ್ಯೋಗ ದೊರಕಿಸುವ ಮಾರ್ಗದರ್ಶಿಯಾಗಿದೆ. ಪ್ರತಿಯೊಂದಕ್ಕೂ ಸರ್ಕಾರದ ಕಡೆಗೆ ನೋಡದೆ ಸರ್ಕಾರದ ಅನೇಕ ಕೆಲಸಗಳನ್ನು ಸಿಕ್ಯಾಬ್ ಸಂಸ್ಥೆ ಸ್ವಯಂಪ್ರೇರಿತವಾಗಿ ಮಾಡಿ ಇತರರಿಗೆ ಮಾದರಿಯಾಗಿದೆ ಎಂದರು.
    ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಎ.ಪುಣೇಕರ ಮಾತನಾಡಿ, ಮಹಿಳೆಯು ಜೀವನದ ಪ್ರತಿ ಹಂತದಲ್ಲಿ ಶೋಷಣೆಗೆ ಒಳಾಗುತ್ತಿದ್ದು, ಆರ್ಥಿಕ ಸ್ವಾವಲಂಬನೆ, ಕಲಿಕೆಯಲ್ಲಿ ಹಿಂದುಳಿದ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತರಬೇತಿಗಳನ್ನು ಕೈಗೊಳ್ಳಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 54 ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಲಾಯಿತು.
    ಹಿರಿಯ ಪತ್ರಕರ್ತರಾದ ರಫಿ ಭಂಡಾರಿ, ಪಾಂಡುರಂಗ ಜೋಷಿ, ಸುರೇಶ ದೇಸಾಯಿ, ಎ.ಎಸ್. ಪಾಟೀಲ, ರಿಯಾಜ್ ಾರೂಕಿ, ಆಯುಬ್ ಪುಣೇಕರ, ಎ. ಎಂ. ಬಗಲಿ, ನಜೀಬ ಬಕ್ಷಿ, ಡಾ. ಮೊಹಮ್ಮದ್ ಅ್ಜಲ್, ಪ್ರೊ.ಭಾಗ್ಯಶ್ರೀ ಸೇವತಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts