More

    ರಾತ್ರಿಯಿಂದಲೇ ಬಸ್ ಸಂಚಾರ ಆರಂಭ

    ವಿಜಯಪುರ: ಸಾರಿಗೆ ನೌಕರರ ಮುಷ್ಕರ ಮೂರನೇ ದಿನವಾದ ಭಾನುವಾರ ರಾತ್ರಿವರೆಗೂ ಮುಂದುವರಿದ ಹಿನ್ನೆಲೆಯಲ್ಲಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು. ರಾತ್ರಿಯಿಂದ ಬಸ್ ಸಂಚಾರ ಎಂದಿನಂತೆ ಕಾರ್ಯಾರಂಭಗೊಂಡಿತು.
    ಭಾನುವಾರ ಬೆಳಗ್ಗೆ ವಿಜಯಪುರ ನಗರದಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಹೋಗಬೇಕಾಗಿದ್ದ ಪ್ರಯಾಣಿಕರು ಬಸ್‌ಗಳಿಲ್ಲದೆ ಕಾದು ಮನೆಗೆ ತೆರಳಿದರು. ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಿಗೆ ಬರಲು ಖಾಸಗಿ ವಾಹನಗಳಲ್ಲಿ ಬರುವಂತಾಗಿತ್ತು. ಅನಿವಾರ್ಯವಾಗಿ ವಿಧಿ ಇಲ್ಲದೆ ಹೆಚ್ಚಿನ ದುಡ್ಡು ತೆತ್ತು ಖಾಸಗಿ ವಾಹನ, ಟೆಂಪೋಗಳಲ್ಲಿ ಪ್ರಯಾಣ ಮಾಡುವಂತಾಯಿತು. ಕೇಂದ್ರ ಬಸ್ ನಿಲ್ದಾಣ ಕಳೆದ ಮೂರು ದಿನಗಳಂತೆ ಭಾನುವಾರವೂ ಬಿಕೋ ಎನ್ನುತ್ತಿತ್ತು.
    ಬಸ್ ಸಂಚಾರ ವಿರಳವಾಗಿದ್ದರಿಂದ ಸಹಜವಾಗಿಯೇ ಖಾಸಗಿ ವಾಹನಗಳ ಸುಗ್ಗಿ ಜೋರಾಗಿತ್ತು. ಕ್ರೂಸರ್, ಟೆಂಪೋ, ಟಂಟಂ, ಮಿನಿ ಬಸ್ ಮೊದಲಾದ ವಾಹನಗಳು ಭರ್ಜರಿ ಸೇವೆ ನೀಡಿದವು, ಹೆಚ್ಚಿನ ಹಣ ಪಡೆದರೂ ಸಹ ಗ್ರಾಹಕರು ಅನಿವಾರ್ಯವಾಗಿ ಊರು ಮುಟ್ಟಲು ಹೆಚ್ಚಿನ ಹಣ ತೆತ್ತು ಊರು ಸೇರುವಂತಾಯಿತು. ವಿಜಯಪುರ ಸಮೀಪದ ಬಬಲೇಶ್ವರ, ತೊರವಿ, ಸಾರವಾಡ, ಕೊಲ್ಹಾರ, ಮನಗೂಳಿ, ಉತ್ನಾಳ, ಗಲಗಲಿ ಮೊದಲಾದ ಊರುಗಳಿಗೆ ಖಾಸಗಿ ವಾಹನಗಳ ಭರಾಟೆ ಜೋರಾಗಿತ್ತು.

    ನಿರ್ವಾಹಕನ ರಂಪಾಟ

    ಕೇಂದ್ರ ಬಸ್ ನಿಲ್ದಾಣದಿಂದ ಸೈನಿಕ ಶಾಲೆ ಬಳಿ ಇರುವ ಸೆಟಲೈಟ್ ಬಸ್ ನಿಲ್ದಾಣದಲ್ಲಿ ಚಾಲಕ ಕಂ ನಿರ್ವಾಹಕ ಕುಡಿದು ರಂಪಾಟ ನಡೆಸಿದ ಘಟನೆ ಭಾನುವಾರ ನಡೆಯಿತು. ನಗರ ಬಸ್ ಸಂಚಾರವನ್ನು ಮುಂಜಾನೆ ಆರಂಭಿಸಲಾಗಿತ್ತು, ಪ್ರಾಯೋಗಿಕ ಬಸ್ ಸಂಚಾರ ವೇಳೆಯಲ್ಲಿ ಬಸ್ ತಡೆಯಲು ಬಂದ ಚಾಲಕ ಕಂ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
    ಕುಡಿದು ರಂಪಾಟ ನಡೆಸಿದ ಕಂಡಕ್ಟರ್ ‘ನಾನು ಡಿಪೋ ನಂ.1ರಲ್ಲಿದ್ದೇನೆ. ನಾನು ಮೊದಲು ಲಖನ್ ಸಾಹುಕಾರರ, ನಂತರ ಸತೀಶ ಜಾರಕಿಹೊಳಿ ಅವರ ಡ್ರೈವರ್ ಆಗಿದ್ದೆ, ಖಾಕಿ ಬಟ್ಟೆ ಹಾಕಿದಾಗ ಕುಡಿಯುವುದಿಲ್ಲ. ಡ್ಯೂಟಿ ಮಾಡುವಾಗ ನಾನು ಡ್ರಿಂಕ್ಸ್ ಮುಟ್ಟುವುದಿಲ್ಲ. ಕೆಲಸದ ಮೇಲೆ ಯಾವತ್ತು ಕುಡಿಯುವುದಿಲ್ಲ ಎಂದು ರಂಪಾಟ ಆರಂಭಿಸಿ ಬಸ್ ತಡೆಯಲು ಮುಂದಾದಾಗ ತಕ್ಷಣವೇ ಕಾರ್ಯಪ್ರವೃತ್ತರಾದ ಗಾಂಧಿಚೌಕ್ ಠಾಣೆ ಪೊಲೀಸರು ಕಂಡಕ್ಟರ್‌ನನ್ನು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts