More

    ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವಿರೋಧ

    ವಿಜಯಪುರ : ಬ್ಯಾಂಕ್‌ಗಳ ಖಾಸಗೀಕರಣ ಖಂಡಿಸಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ವತಿಯಿಂದ ಸೋಮವಾರ ವಿಜಯಪುರದ ಕೆನರಾ ಬ್ಯಾಂಕ್ ಮುಂದೆ ನೌಕರರು ಪ್ರತಿಭಟನೆ ನಡೆಸಿದರು.

    ಸಂಘಟನೆ ಮುಖಂಡ ಜಿ.ಜಿ. ಗಾಂಧಿ ಮಾತನಾಡಿ, ಪ್ರವರ್ತಕ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರಿಂದ ರೈತರಿಗೆ, ಕೃಷಿ ಕಾರ್ಮಿಕರು, ಗುಡಿ ಕೈಗಾರಿಕೆ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. 11ನೇ ವೇತನ ಪರಿಷ್ಕರಣೆ 11ನೇ ನವೆಂಬರ್ 2020ರಂದು ಜಾರಿಗೆ ಬಂದಿದ್ದು, ಇಲ್ಲಿಯವರೆಗೂ ಗ್ರಾಮೀಣ ಬ್ಯಾಂಕ್ ನೌಕರರಿಗೆ ಜಾರಿಗೆ ಬಂದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಮುಖಂಡ ಶಿವಾಜಿ ಇನಾಮದಾರ ಮಾತನಾಡಿ, ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಷ್ಟ್ರಿಕೃತ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಮತ್ತು ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರಿಂದ ಸಾಮಾನ್ಯ ಜನರು ಬ್ಯಾಂಕ್ ಸೌಲಭ್ಯದಿಂದ ವಂಚಿತರಾಗುತ್ತಾರೆ. ಸಾಮಾನ್ಯ ಜನರು ಬ್ಯಾಂಕಿನಲ್ಲಿ ಇಟ್ಟಂತಹ ಠೇವಣಿ ಖಾಸಗಿಯವರ ಪಾಲಾಗುವುದು ಮತ್ತು ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ. ಇದರಿಂದ ನಿರುದ್ಯೋಗ ಹೆಚ್ಚಾಗುತ್ತದೆ ಎಂದರು.

    ಸಂಘಟನೆ ಮುಖಂಡರಾದ ಅಜಯ ಚವ್ಹಾಣ, ಆರ್.ಎಸ್. ಕುಲಕರ್ಣಿ, ಸಿ.ಎ. ಗಂಟೆಪ್ಪಗೋಳ, ಅಶೋಕ ಉಪಾಧ್ಯಾಯ, ಕಾ. ರಾಹುಲ ಪೋಳ, ಸುನೀಲ ನಾಯ್ಕ, ಬಸವರಾಜ ಸರಬಡಗಿ, ವಿಶ್ವನಾಥ ರೆಡ್ಡಿ, ಶ್ರೀಕಾಂತ ದಶವಂತ, ಹರೀಶ ಗಾವರಿ, ರಾಕೇಶ ರಾಮದುರ್ಗಕರ, ಕವಿತಾ ಜಾಧವ, ಶಾರದಾ ಹೊನಕೇರಿ, ವಿ.ಪಿ. ಹೊಸೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts