More

    ಡಾ.ಆರ್.ಎಸ್.ಮುಧೋಳ ನೇಮಕ

    ವಿಜಯಪುರ : ಇಲ್ಲಿನ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಉಪ ಕುಲಪತಿಯಾಗಿ ಡಾ.ಆರ್.ಎಸ್.ಮುಧೋಳ ನೇಮಕಗೊಂಡಿದ್ದಾರೆ.

    ಮೂಲತಃ ಅಥಣಿ ತಾಲೂಕಿನ ಕೋವಳ್ಳಿ ಗ್ರಾಮದ ಮುಧೋಳ ಅವರು, ವಿಜಯಪುರದ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪಿಯು ಮುಗಿಸಿ, ಹುಬ್ಬಳ್ಳಿಯ ಕೆಎಂಸಿಯಲ್ಲಿ ಎಂಬಿಬಿಎಸ್ ಮತ್ತು ಎಂ.ಎಸ್ ಶಿಕ್ಷಣದ ನಂತರ ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ, ಉಪ ಪ್ರಾಚಾರ್ಯ, ಆಸ್ಪತ್ರೆ ಸೂಪರಿಟೆಡೆಂಟ್ ಹಾಗೂ ನಿರ್ದೇಶಕರಾಗಿ 35 ವರ್ಷಗಳ ಅಪಾರ ಆಡಳಿತದ ಅನುಭವ ಹೊಂದಿದ್ದಾರೆ.

    ಕಿವಿ, ಮೂಗು ಮತ್ತು ಗಂಟಲು ತಜ್ಞರು ಆಗಿರುವ ಡಾ.ಆರ್.ಎಸ್.ಮುಧೋಳ ಅವರು, ನಾಲ್ಕು ತಿಂಗಳ ಹಿಂದೆ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಸಮ ಉಪಕುಲಪತಿಯಾಗಿ ನೇಮಕಗೊಂಡಿದ್ದರು. ಉಪ ಕುಲಪತಿಯಾಗಿದ್ದ ಡಾ.ಎಂ.ಎಸ್.ಬಿರಾದಾರ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಡಾ.ಆರ್.ಎಸ್.ಮುಧೋಳ ಅವರನ್ನು ಹಂಗಾಮಿ ಉಪ ಕುಲಪತಿಯಾಗಿ ನೇಮಕಗೊಳಿಸಲಾಗಿದೆ ಎಂದು ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts