More

    ಸಾಕಿದ ಹೋರಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ ರೈತ: ಕೇಕ್​ ಕತ್ತರಿಸಿ, ಊರಿಗೆಲ್ಲ ಊಟ

    ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ರೈತರೊಬ್ಬರು ತಾವು ಸಾಕಿದ ಹೋರಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

    ಮಸಬಿನಾಳ ಗ್ರಾಮದ ಜನರೆಲ್ಲರನ್ನು ಸೇರಿಸಿ 5 ವರ್ಷದ ಹಿಂದೆ ತಮ್ಮ ಮನೆಯಲ್ಲಿ ಹುಟ್ಟಿದ ಹೋರಿಗೆ ರೈತ ಮಲ್ಲಪ್ಪ ಗಾಜರೆ ಅವರು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಹೋರಿ ಹುಟ್ಟಿದಾಗಲೇ ಹೋರಿಗೆ ಪ್ರೀತಿಯಿಂದ ರಾಜ ಅಂತಾ ಹೆಸರಿಟ್ಟಿದ್ದಾರೆ. ಪ್ರತಿ ವರ್ಷವೂ ರಾಜನ ಬರ್ತಡೇ ಮಾಡುತ್ತಾ ಬರುತ್ತಿದ್ದಾರೆ. ಹೋರಿಯ ಬರ್ತಡೇ ಹಿನ್ನೆಲೆ ಮಸಿಬಿನಾಳ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರತಿ ವರ್ಷ ಜನೆವರಿ 26 ರಂದು ಹೋರಿಯ ಬರ್ತಡೇ ಆಚರಿಸ್ತಾರೆ. ಅಂದು ಊರಿಗೆ ಊಟ ಹಾಕುತ್ತಾರೆ. ಡಿಜೆ ಹಚ್ಚಿ ಯುವಕರು ಸೇರಿ ಸಂಭ್ರಮಿಸುತ್ತಾರೆ.

    ಈ ವರ್ಷವೂ 5ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ‌. ನೆಚ್ಚಿನ ಹೋರಿ ರಾಜನ 5ನೇ ವರ್ಷದ ಬರ್ತಡೇಗೆ ಹೋರಿ ಮಾಲಿಕ ಮಲ್ಲಪ್ಪ 5 ಕೆಜಿಯ ಕೇಕ್ ರೆಡಿ ಮಾಡಿಸಿ, ಊರ ಜನರನ್ನು ಒಂದೆಡೆ ಸೇರಿಸಿ ಬರ್ತಡೇ ಆಚರಿಸಿದ್ದಾರೆ. ಒಂದನೇ ವರ್ಷದ ಬರ್ತಡೇಗೆ ಒಂದು ಕೆ.ಜಿ, ಎರಡನೇ ವರ್ಷದ ಬರ್ತಡೇಗೆ ಎರಡು ಕೆ.ಜಿ, ಮೂರನೇ ವರ್ಷಕ್ಕೆ‌ ಮೂರು ಕೆ.ಜಿ, ಅದೇ ರೀತಿ ಪ್ರಸ್ತುತ 5ನೇ ವರ್ಷದ ಬರ್ತಡೇಗೆ 5 ಕೆಜಿ ಕೇಕ್ ಕಟ್ ಮಾಡಿದ್ದಾರೆ‌. (ದಿಗ್ವಿಜಯ ನ್ಯೂಸ್​)

    ವಿಷ್ಣು ಸ್ಮಾರಕ ಉದ್ಘಾಟನೆ: ಬೆಂಗಳೂರಿಂದ ಮೈಸೂರಿನವರೆಗೆ 1000 ರಥಯಾತ್ರೆ, ದಾರಿಯುದ್ದಕ್ಕೂ ಕಟೌಟ್ ಜಾತ್ರೆ

    ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಂದೀಪ್​ ರಾಯ್ ವಿಧಿವಶ

    ಮೂವರು ಮಕ್ಕಳ ಸಮೇತ ಸಂಪ್​ಗೆ ಬಿದ್ದು ಸಾವಿಗೆ ಶರಣಾದ ಮಹಿಳೆ: ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts