More

    ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಂದೀಪ್​ ರಾಯ್ ವಿಧಿವಶ

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಂದೀಪ್​ ರಾಯ್ (73) ಅವರು ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗಷ್ಟೇ ಹೃದಯಘಾತಕ್ಕೀಡಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದೀಗ ಹೃದಯಾಘಾತದಿಂದಲೇ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

    ಬೆಂಗಳೂರಿನ ಕಾವಲ್​ ಭೈರಸಂದ್ರದಲ್ಲಿರುವ ನಿವಾಸದಲ್ಲಿ ತಡರಾತ್ರಿ 1.45 ಸುಮಾರಿಗೆ ಹೃದಯಾಘಾತದಿಂದ ಮಂದೀಪ್​ ರಾಯ್​ ಅಸುನೀಗಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಹೃದಯಾಘಾತದಿಂದ ಬಳಲಿದ್ದ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಬಳಿಕ ಡಿಸ್ಚಾರ್ಜ್​ ಆಗಿ ಮನೆಯಲ್ಲಿದ್ದರು.

    ಇಂದು ಬೆಳಗ್ಗೆ 11 ಗಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ಮಂದೀಪ್​ ರಾಯ್​ ಅವರ ಅಂತ್ಯಕ್ರಿಯೆ ನರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

    ನಟ ಅನಂತ್ ನಾಗ್ ಮತ್ತು ಶಂಕರ್ ನಾಗ್ ಜೊತೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಮನ್​ದೀಪ್ ರಾಯ್ ಅವರು ಡಾ.ರಾಜ್​ಕುಮಾರ್​ ಸೇರಿದಂತೆ ಸಿನಿ ದಿಗ್ಗಜರ ಜೊತೆ ನಟಿಸಿದ್ದಾರೆ. ಮಿಂಚಿನ ಓಟ, ಬೆಂಕಿಯ ಬಲೆ, ಆಕಸ್ಮಿಕ, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತರಕ್ಷಕ, ಆಂಟಿ ಪ್ರೀತ್ಸೆ, ಪ್ರೀತ್ಸೋದ್ ತಪ್ಪಾ?… ಹೀಗೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    ಮೂವರು ಮಕ್ಕಳ ಸಮೇತ ಸಂಪ್​ಗೆ ಬಿದ್ದು ಸಾವಿಗೆ ಶರಣಾದ ಮಹಿಳೆ: ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆ

    ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ: ಸರ್ಕಾರ, ಚಲನಚಿತ್ರ ಮಂಡಳಿ ವಿರುದ್ಧ ಅಭಿಮಾನಿಗಳ ಆಕ್ರೋಶ

    ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ: ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts