More

    ಕೃಷ್ಣಾ ತೀರದ ಗ್ರಾಮಗಳಿಗೆ ಭೇಟಿ ನೀಡಿದ ಎಸಿ

    ಆಲಮಟ್ಟಿ: ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಮತ್ತೂರ ಕಾರ್ಮಿಕ ಅಧಿಕಾರಿ ಮತ್ತು ನಿಡಗುಂದಿ ತಾಲೂಕಿನ ನೋಡೆಲ್ ಅಧಿಕಾರಿ ಸೂರಪ್ಪ ಡಂಬರ ಅವರು ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
    ಬೆಳೆಹಾನಿ, ಹಾನಿಯಾದ ಮನೆಗಳ ಸಮೀಕ್ಷೆ ಮಾಡಿ ಲಾಗಿನ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಡಗುಂದಿ ತಾಲೂಕಿನಲ್ಲಿ ಈವರೆಗೆ ಅಂದಾಜು 7000 ಹೆಕ್ಟೇರ್ ಕೃಷಿ ಜಮೀನಿನಲ್ಲಿದ್ದ ಬೆಳೆ ಮತ್ತು ತೋಟಗಾರಿಕೆಯ 100 ಹೆಕ್ಟೇರ್‌ನಲ್ಲಿದ್ದ ಬೆಳೆಗಳು ಹಾಳಾಗಿವೆ. ಅಂದಾಜು 235 ಮನೆಗಳಿಗೆ ಹಾನಿಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
    ನಂತರ ನದಿ ತೀರದ ಗ್ರಾಮಗಳಾದ ಅರಳಲದಿನ್ನಿ, ಯಲಗೂರ, ಕಾಶಿನಕುಂಟಿ, ಯಲ್ಲಮ್ಮನ ಬೂದಿಹಾಳ, ಹೊಳೆಮಸೂತಿ ಗ್ರಾಮಗಳಿಗೆ ಭೇಟಿ ನೀಡಿ ಸದ್ಯದ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
    ತಹಸೀಲ್ದಾರ್ ಶಿವಲಿಂಗಪಭು ವಾಲಿ, ಗಂಗಾಧರ ಜೂಲಗುಡ್ಡ ಸೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts