More

    ಆಲಮಟ್ಟಿ ಡ್ಯಾಂ ರಾಷ್ಟ್ರೀಯ ಯೋಜನೆ ಘೋಷಣೆಗೆ ಒತ್ತಾಯ

    ವಿಜಯಪುರ: ಆಲಮಟ್ಟಿ ಲಾಲ್ ಬಹಾದುರ್ ಶಾಸ್ತ್ರಿ ಜಲಾಶಯವನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಂಘಟನೆ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಅಣೆಕಟ್ಟೆ ನೀರಿನ ಮಟ್ಟವನ್ನು 524.56ಕ್ಕೆ ನಿಲ್ಲಿಸಬೇಕಾದರೆ ಒಂದು ಲಕ್ಷ ಕೋಟಿ ಹಣದ ಅವಶ್ಯಕತೆ ಇದೆ. 524.256ಕ್ಕೆ ನೀರು ನಿಲ್ಲಿಸಿದರೆ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಇನ್ನೂ 12 ರಿಂದ 13 ಗ್ರಾಮಗಳು ಮುಳುಗಡೆ ಆಗುತ್ತವೆ ಎಂದರು.

    ವಿಜಯಪುರ ಮೊದಲಿನಿಂದಲೂ ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ. ಆಲಮಟ್ಟಿ ಆಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಲಕ್ಷಾಂತರ ಎಕರೆ ಜಮೀನು, ಮನೆಗಳನ್ನು ಕಳೆದುಕೊಂಡ ಜಿಲ್ಲೆಯ ಜನತೆಗೆ ಇನ್ನೂ ಸರಿಯಾಗಿ ಕುಡಿಯಲು ನೀರು ಸಿಗುತ್ತಿಲ್ಲ. ಗುಜರಾತ್‌ನಲ್ಲಿ ಸರ್ದಾರ್ ಸರೋವರವನ್ನು ರಾಷ್ಟ್ರೀಯ ಯೋಜನೆ ಎಂದು ಈಗಾಗಲೇ ಘೋಷಿಸಲಾಗಿದೆ. ಅದರಂತೆ ಕೆಬಿಜೆಎನ್‌ಎಲ್ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

    ಸಂಗನಬಸವ ಸ್ವಾಮೀಜಿ ಮಾತನಾಡಿ, ಜಲಾಶಯ ನಿರ್ಮಾಣದ ವೇಳೆ ಮನೆ, ಜಮೀನು ಕಳೆದುಕೊಂಡ ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಆಲಮಟ್ಟಿ ಜಲಾಶಯವನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡಬೇಕು. ಕೇಂದ್ರ ಸರ್ಕಾರವೂ ಶೀಘ್ರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 524.256 ಕ್ಕೆ ಗೇಟ್ ಅಳವಡಿಸಿ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

    ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ರೈತ ಮುಖಂಡರಾದ ಚಂದ್ರಾಮ ತೆಗ್ಗಿ, ಹೊನಕೇರಪ್ಪ ತೆಲಗಿ, ಶೇಖಪ್ಪ ಕರಾಬಿ, ಎಸ್. ಜಿ. ಸಂಗೊಂದಿಮಠ, ಬಸಪ್ಪ ಮುಳವಾಡ, ನಾರಾಯಣ ವಿದಾತೆ, ಕುಶಾಲಸಿಂಗ ನರಗುಂದ, ಬಸವರಾಜ ಅವಟಿ, ಬಿ.ಎಸ್.ಸರಸಂಬಿ, ವಿ.ಎನ್.ಕೊಣ್ಣೂರ, ಸಿದ್ದು ಹುಲಿಬೆಂಚಿ, ಬಸವರಾಜ ಜಂಗಮಶೆಟ್ಟಿ, ನಂದುಗೌಡ ಬಿರಾದಾರ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts