More

    ರಾಜಧಾನಿಯಲ್ಲಿ ಎಐಯುಟಿಯುಸಿ ಧರಣಿ

    ವಿಜಯಪುರ: ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಜ. 22ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಧರಣಿಯಲ್ಲಿ ಜಿಲ್ಲೆಯ ಹಲವು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳುತ್ತಿರುವುದಾಗಿ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ.ತಿಳಿಸಿದರು. ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಧರಣಿಯಲ್ಲಿ ಸಂಘಟಿತ-ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಸ್ಕೀಮ್ ಕಾರ್ಮಿಕರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜ.26ರಂದು ನಡೆಯುವ ರೈತ-ಕಾರ್ಮಿಕರ ಪರ್ಯಾಯ ಪರೇಡ್‌ನಲ್ಲಿ ಕೂಡ ಎಐಯುಟಿಯುಸಿ ತನ್ನ ಎಲ್ಲ ಸೆಕ್ಟರ್‌ಗಳ ಕಾರ್ಮಿಕರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾೃಕ್ಟರ್‌ಗಳು, ವಿವಿಧ ವಾಹನಗಳೊಂದಿಗೆ ಭಾಗವಹಿಸಲಿದೆ ಎಂದರು.
    ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರನ್ನೊಳಗೊಂಡ ಅಸಂಘಟಿತ ವಲಯದ ನೌಕರರ ಮತ್ತು ಸ್ಕೀಮ್ ವರ್ಕರ್‌ಗಳ ಹಾಗೂ ದಿನಗೂಲಿ ನೌಕರರ ಜೀವನ ಸಂಕಷ್ಟದಲ್ಲಿದೆ. ಗುತ್ತಿಗೆ ಕಾರ್ಮಿಕರನ್ನು ಶೋಷಣೆ ಮಾಡುವುದು ಲಂಗುಲಗಾಮಿಲ್ಲದೆ ನಡೆಯುತ್ತಿದೆ. ಕಾಯ್ದೆಗಳನ್ನು ಬದಲಾಯಿಸಿ ಇನ್ನಷ್ಟು ಕಾರ್ಮಿಕರನ್ನು ಅಸಹಾಯಕರನ್ನಾಗಿಸುವ, ಮಾಲೀಕರ ಮರ್ಜಿಗೆ ತಳ್ಳಿ ಗುಲಾಮರನ್ನಾಗಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಆಗ್ರಹಿಸಿ ಜ.22 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾದ ಧರಣಿಯಲ್ಲಿ ಎಲ್ಲ ವಿಭಾಗದ ಕಾರ್ಮಿಕರು ಮತ್ತು ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದಾಗಿ ಮಲ್ಲಿಕಾರ್ಜುನ ತಿಳಿಸಿದರು. ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಮಹಾದೇವಿ ಧರ್ಮಶೆಟ್ಟಿ ಇದ್ದರು. ಹೋರಾಟದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts