More

    ಎಐಕೆಕೆಎಂಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ

    ವಿಜಯಪುರ: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಗುರುವಾರ ಆಲ್ ಇಂಡಿಯಾ ಕಿಸಾನ್ ಖೇತ್ ಮಜ್ದೂರ್ ಸಂಘಟನೆ ಸಂಯೋಜಿತ ರೈತ ಕೃಷಿ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
    ನಗರದ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಯ್ದೆ ಪ್ರತಿಗಳನ್ನು ದಹನ ಮಾಡಿ ಆಕ್ರೋಶ ಹೊರಹಾಕಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
    ರಾಜ್ಯ ಉಪಾಧ್ಯಕ್ಷ ಬಿ. ಭಗವಾನ್‌ರೆಡ್ಡಿ ಮಾತನಾಡಿ, ನ.26ರಿಂದ ದೇಶದ ರಾಜಧಾನಿಗೆ ಮುನ್ನುಗ್ಗುತ್ತಿರುವ ಲಕ್ಷೋಪಲಕ್ಷ ರೈತರು ಕೇಂದ್ರ ಸರ್ಕಾರದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನಗಳ ವ್ಯಾಪಾರ ವಾಣಿಜ್ಯ ಕಾಯ್ದೆ(ಎಪಿಎಂಸಿ ಅನೂರ್ಜಿತಗೊಳಿಸುವ ಕಾಯ್ದೆ) ಮತ್ತು ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೃಷಿ ಸೇವೆಗಳ ರೈತರ ಒಪ್ಪಂದ ಕಾಯ್ದೆ (ಗುತ್ತಿಗೆ ಕೃಷಿ ಒಪ್ಪಂದಕಾಯ್ದೆ) ಎಂಬ ಮೂರು ಕೃಷಿ ಸಂಬಂಧ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟ ಇಡೀ ರೈತ ಸಮುದಾಯಕ್ಕೆ ಆದರ್ಶಪ್ರಾಯ ಎಂದರು.

    ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಕೇಂದ್ರ ಸರ್ಕಾರ ಮಾನವಿಯತೆ ಕಳೆದುಕೊಂಡಿದೆ. ಈವರೆಗೆ ಸಹಿಸಿಕೊಂಡಿದ್ದ ರೈತರು ಇಂದು ರೊಚ್ಚಿಗೆದ್ದಿದ್ದಾರೆ. ಇನ್ನು ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದರು.

    ಎಐಡಿವೈಒ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ., ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷ ದುಂಡೇಶ್ ಬಿರಾದಾರ, ತಿಪರಾಯ ಹತ್ತರಕಿ, ಕಾಸಿಬಾಯಿ ಜಿ.ಟಿ., ಸುನೀಲ ಸಿದ್ರಾಮಶೆಟ್ಟಿ, ಆಕಾಶ ಬಿರಾದಾರ, ಕಾವೇರಿ ರಜಪೂತ, ಯಲ್ಲಪ್ಪ ಹರಗೆ, ಮರೀಬಾ ಮಾನೆ, ಪ್ರಭು ಮಾನೆ, ಪಾಂಡು ಮಾನೆ, ತುಕಾರಾಮ ಪಾಂಡ್ರೆ, ಹಣಮಂತರಾಯ ಕಂಠಿ, ಸಿ.ಎಸ್. ಕಂಬಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts